Saturday, 10th May 2025

TUDA: ಟೂಡಾದವತಿಯಿಂದ ರಸ್ತೆ ನಿರ್ಮಾಣ

ತುಮಕೂರು: ನಗರದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದ ಜಿಲ್ಲಾಮಟ್ಟದ ಪ್ರಮುಖ ಮೂರು ಇಲಾಖೆಗಳ ಕಟ್ಟಡಗಳಿಗೆ ಓಡಾಡಲು ಸೂಕ್ತ ರಸ್ತೆ ಹಾಗೂ ಪಾರ್ಕಿಂಗ್ ಸೌಲಭ್ಯವೂ ಇಲ್ಲದೆ ಜಿಲ್ಲೆಯ ಜನ ಪರದಾಡುವಂತಾಗಿತ್ತು, ಈ ಬಗ್ಗೆ ದೂರು ಸ್ವೀಕರಿಸಿದ್ದ ಟೂಡಾ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಗೋಡೆ ಕೆಡವಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ.

ರಸ್ತೆ ಇಲ್ಲದೆ ಪರಿತಪಿಸುತ್ತಿದ್ದ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಮತ್ತು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಹಾಗೂ ಟೂಡಾ ಆಡಳಿತದ ಎಲ್ಲರಿಗೂ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ (ಆರಿಫ್) ಹಾಗೂ ವಕ್ಫ್ ಜಿಲ್ಲಾ ಸಮಿತಿಯವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ನಗರದ ಉಪ್ಪಾರಹಳ್ಳಿಯ ಪಿ.ಎನ್.ಕೆ. ಟೌನ್‌ಶೀಪ್‌ನ ಸಿ.ಎ. ಸೈಟ್ ಖರೀದಿಸಿ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಂಡಿ ರುವ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ವಕ್ಪ್ ಕಚೇರಿಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ ಹಾಗೂ ಪಾರ್ಕಿಂಗ್ ಸೌಲಭ್ಯಗಳಿಲ್ಲದೆ ಕಚೇರಿಗೆ ಬರುವ ಜನರು ಪರದಾಡು ವಂಥ ಸ್ಥಿತಿ ಬಂದಿತ್ತು. ಈ ಬಗ್ಗೆ ಟೂಡಾ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಸಮಸ್ಯೆ ಬಗೆಹರಿ ಸಲು ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಗೆ ಅಡ್ಡವಾಗಿ ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಟೂಡಾ ಅಧಿಕಾರಿಗಳು ತೆರವು ಗೊಳಿಸಿದ್ದಾರೆ.

ಗೋಡೆ ತೆರವಿನ ನಂತರ ಅದರ ಮುಂದಿನ ಚರಂಡಿಯನ್ನು ಬಿಗಿಯಾದ ಸ್ಲಾಬ್‌ಗಳ ಮುಖಾಂತರ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಿಸಾರ್ ಅಹಮದ್ (ಆರಿಫ್) ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *