ಬೆಂಗಳೂರು: ಡಿಸೆಂಬರ್ 8 ರಂದು ಜಪಾನ್ ನ ಟೊಯೋಟಾ ಮೋಟಾರ್ ಕಾರ್ಪೊರೇಷನ್ ನಲ್ಲಿ ನಡೆಯಲಿರುವ ಅತ್ಯಂತ ಪ್ರತಿಷ್ಠಿತ ಗ್ಲೋಬಲ್ ಟೊಯೊಟಾ ಎಕಿಡೆನ್ ರಿಲೇ ರೇಸ್ 2024 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಜ್ಜಾಗಿದೆ. ಇದೇ ಮೊದಲ ಬಾರಿಗೆ 10 ಮಹಿಳಾ ಉದ್ಯೋಗಿಗಲು ಸೇರಿದಂತೆ ಒಟ್ಟು 20 ಮಂದಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಟಿಕೆಎಂ ತಂಡದಲ್ಲಿ ಅರ್ಧ ಮಂದಿ ಮಹಿಳೆಯರಿರುವುದು ಸಂಸ್ಥೆಯು ಲಿಂಗ ಸಮಾನತೆ ಕುರಿತು ಹೊಂದಿರುವ ಬದ್ಧತೆಗೆ ಪುರಾವೆಯಾಗಿದೆ.
ಟೊಯೋಟಾದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಏಕತೆ, ದೃಢತೆ ಮತ್ತು ಸಹಯೋಗದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಜಪಾನ್ ನಲ್ಲಿ ಎಕಿಡೆನ್ ರಿಲೇ ರೇಸ್ ಆರಂಭಗೊಂಡಿತು. ಟಿಕೆಎಂ 2005ರಿಂದಲೂ ತಮ್ಮ ಉದ್ಯೋಗಿಗಳಿಗೆ ಆರೋಗ್ಯ ಮತ್ತು ಟೀಮ್ ವರ್ಕ್ ಕಡೆಗೆ ಆದ್ಯತೆ ನೀಡಲು ಪ್ರೋತ್ಸಾಹಿಸಲು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ.
ಉದ್ಯೋಗಿಗಳ ಯೋಗಕ್ಷೇಮದ ಮೇಲೆ ಗಮನ ಹರಿಸುವ ಟೊಯೋಟಾ ಮೋಟಾರ್ ಕಾರ್ಪೊರೇಶನ್ ನ ನಿಲುವಿನಿಂದ ಸ್ಫೂರ್ತಿ ಹೊಂದಿರುವ ಟಿಕೆಎಂ ಫಿಟ್ ನೆಸ್ ಕುರಿತು ಸ್ಫೂರ್ತಿ ನೀಡಲು ಮತ್ತು ಟೀಮ್ ಸ್ಪಿರಿಟ್ ಹೆಚ್ಚಿಸಲು ಎಕಿಡೆನ್ ಮತ್ತು ಮ್ಯಾರಥಾನ್ ಗಳಂತಹ ಕಾರ್ಯಕ್ರಮ ಗಳನ್ನು ನಡೆಸುತ್ತಾ ಬಂದಿದೆ. ಆರೋಗ್ಯಕರ ದೇಹ ಮತ್ತು ಮನಸ್ಸು ಇದ್ದರೆ ಸಂತೋಷದ ಜೀವನ ನಡೆಸಬಹುದು ಮತ್ತು ಹೆಚ್ಚು ಉತ್ಪಾದಕತೆಯುಳ್ಳ ಕೆಲಸದ ವಾತಾವರಣ ನಿರ್ಮಾಣ ಮಾಡಬಹುದು ಎಂಬ ಟೊಯೋಟಾದ ನಂಬಿಕೆಗೆ ಪೂರಕವಾಗಿ ಈ ಕಾರ್ಯಕ್ರಮಗಳು ನಡೆಯುತ್ತವೆ.
ಜಪಾನ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಮಹಿಳಾ ತಂಡದಲ್ಲಿ ಲಾವಣ್ಯ ಡಿ.ಎನ್., ಎಂ.ಶೆಂದೂರೆ ಮಾಧವಿ, ರಂಜಿತಾ ಕೆ., ಬಿ.ಎಲ್. ಚೈತ್ರಾ, ಸರಿತಾ, ಕವನ ಎನ್.ಆರ್., ದೀಪಿಕಾ ಕೆ., ಸೌಮ್ಯಾ ಜಮ್ಮಿಹಾಲ್, ಐಶ್ವರ್ಯ ಡಿ.ಜೆ., ಮತ್ತು ಮೇಘನಾ ಎಸ್. ಆಚಾರ್ಯ ಇದ್ದಾರೆ. ಪುರುಷರ ತಂಡದಲ್ಲಿ ಗಗನ್ ಬಿ.ಆರ್., ರಮೇಶ್ ಹಣಮಂತ್ ಸಿಂಗಾಡಿ, ಕೆ.ಶರಣಪ್ಪ, ಕಿಶೋರ್ ಎಂ.ಕೆ., ಎಂ.ವೈ. ಸಂದೀಪ್ ಕುಮಾರ್, ಎಂ.ಉದಯ್ ಕುಮಾರ್, ಸಿದ್ದಾರ್ಥ ಎಂ.ಎಸ್., ಮಧು ಕೆ.ಎಂ., ಸಿದ್ದರಾಜು ಸಿ., ಮತ್ತು ದರ್ಶನ್ ಎ ಇರುತ್ತಾರೆ.
ಈ ಉದ್ಯೋಗಿಗಳು ತಮ್ಮ ಫಿಟ್‌ನೆಸ್ ಅನ್ನು ಹೆಚ್ಚಿಸಲು, ಸಹಿಷ್ಣುತೆಯನ್ನು ಹೆಚ್ಚಿಸಲು ಮತ್ತು ಅವರ ಟೀಮ್ ವರ್ಕ್ ಶಕ್ತಿಯನ್ನು ಹೆಚ್ಚಿಸಲು ಟೈಮ್ ಟ್ರಯಲ್ ಗಳು ಮತ್ತು ಅಭ್ಯಾಸ ಓಟದ ಪಂದ್ಯಗಳು ಸೇರಿದಂತೆ ತಿಂಗಳುಗಳ ಕಾಲ ಕಠಿಣ ತರಬೇತಿಯನ್ನು ಪಡೆದಿದ್ದಾರೆ. ಈ ತಯಾರಿ ಮತ್ತು ತರಬೇತಿ ಅವರನ್ನು ದೈಹಿಕವಾಗಿ ಗಟ್ಟಿಗೊಳಿಸುವುದರ ಜೊತೆಗೆ ತಂಡದ ಸದಸ್ಯರ ಮಧ್ಯದ ಬಾಂಧವ್ಯ ಗಟ್ಟಿಯಾಗುವಂತೆ ಮಾಡಿದೆ. ಈ ಬಂಧ ಮತ್ತು ಅವರ ದೈಹಿಕ ಕ್ಷಮತೆಯು ರೇಸ್ ನಲ್ಲಿ ಅವರು ಜಯಗಳಿಸುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಈ ಕುರಿತು ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾ ಧ್ಯಕ್ಷರಾದ ಶ್ರೀ ಜಿ. ಶಂಕರ ಅವರು, “ಎಕಿಡೆನ್ ರಿಲೇ ರೇಸ್ ಕಾರ್ಯಕ್ರಮವು ಟೀಮ್ ವರ್ಕ್ ನ ಶಕ್ತಿ ಮತ್ತು ಒಳಗೊಳ್ಳುವಿಕೆಯ ಶಕ್ತಿಗೆ ಉಜ್ವಲ ಉದಾಹರಣೆಯಾಗಿದೆ. ಈ ಪ್ರತಿಷ್ಠಿತ ಜಾಗತಿಕ ವೇದಿಕೆಯಲ್ಲಿ ನಮ್ಮ ಉದ್ಯೋಗಿಗಳು ಟಿಕೆಎಂ ಅನ್ನು ಪ್ರತಿನಿಧಿಸುತ್ತಿರುವುದನ್ನು ನೋಡುವುದು ನಮಗೆ ಹೆಮ್ಮೆತಂದಿದೆ. ಅಲ್ಲದೇ ಈ ವರ್ಷ ಮಹಿಳಾ ತಂಡವು ಕೂಡ ಭಾಗವಹಿಸುತ್ತಿದ್ದು, ಇದು ಟಿಕೆಎಂ ಪರಂಪರೆಯಲ್ಲಿ ಮಹತ್ವದ ಮೈಲಿಗಲ್ಲಾ ಗಿದೆ.
ಲಿಂಗ ವೈವಿಧ್ಯತೆ ಕುರಿತಾದ ನಮ್ಮ ಬದ್ಧತೆ ಮತ್ತು ಎಲ್ಲರಿಗೂ ಅವಕಾಶಗಳನ್ನು ಸೃಷ್ಟಿಸುವ ನಮ್ಮ ನಂಬಿಕೆಯನ್ನು ಈ ನಡೆ ಪ್ರತಿಬಿಂಬಿಸುತ್ತದೆ. ಟಿಕೆಎಂನಲ್ಲಿ ನಮ್ಮ ಸಮಗ್ರ ತಂಡವು ನಮ್ಮ ಸಂಸ್ಥೆಯ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವುದು ಮಾತ್ರವಲ್ಲದೇ ಹೊಸತನ ಮತ್ತು ಶ್ರೇಷ್ಠತೆಯ ಉದಾಹರಣೆಯಾಗಿ ಕೆಲಸ ಮಾಡುವುದನ್ನು ನಾವು ಗಮನಿಸಿದ್ದೇವೆ. ವೈಯಕ್ತಿಕ ಮತ್ತು ವೃತ್ತಿಪರ ಗೆಲುವಿಗೆ ಆರೋಗ್ಯಕರವಾದ ದೇಹ ಮತ್ತು ಆರೋಗ್ಯಕರ ಮನಸ್ಸು ಹೊಂದುವುದು ಅತ್ಯಗತ್ಯ ಎಂಬ ನಮ್ಮ ನಂಬಿಕೆಯನ್ನು ಎಕಿಡೆನ್ ರೇಸ್ ಮತ್ತಷ್ಟು ದೃಢಗೊಳಿಸುತ್ತದೆ. ಯೋಗಕ್ಷೇಮ ಒದಗಿಸುವ ಮತ್ತು ಸಮಾನತೆಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಲು ಮತ್ತು ಅರ್ಥಪೂರ್ಣ ಕೊಡುಗೆ ನೀಡುವ ವಾತಾವರಣವನ್ನು ನಾವು ನಿರ್ಮಿಸುತ್ತೇವೆ” ಎಂದು ಹೇಳಿದರು.
ಟಿಕೆಎಂ ತಂಡವು ಜಪಾನ್ ನಲ್ಲಿ ನಡೆಯಲಿರುವ ಜಾಗತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಅವರು ತಮ್ಮೊಂದಿಗೆ ಆರೋಗ್ಯ, ಸಹಯೋಗ ಮತ್ತು ದೃಢತೆಯ ಮೌಲ್ಯಗಳನ್ನು ಜಪಾನ್ ಗೆ ಕರೆದೊಯ್ಯಲಿದ್ದಾರೆ. ಆರೋಗ್ಯಕರ ಉದ್ಯೋಗಿಗಳ ತಂಡವನ್ನು ರೂಪಿಸುವ ಮೂಲಕ ಉತ್ತಮ ಬಂಧ ಉಂಟಾಗುವುಂತೆ ಮಾಡುವುದು ಮತ್ತು ಸಂಸ್ಥೆಯೊಳಗೆ ಅತ್ಯುತ್ತಮ ಸಾಧನೆ ಮಾಡಲು ಪ್ರೇರೇಪಿಸುವುದು ಸಾಧ್ಯ ಎಂಬ ಟೊಯೋಟಾದ ನಂಬಿಕೆಗೆ ಈ ಜಾಗತಿಕ ಕಾರ್ಯಕ್ರಮವು ಉತ್ತಮ ಪುರಾವೆಯಾಗಿದೆ.