Saturday, 10th May 2025

ಶಿಕ್ಷಕ ಹೃದಯಾಘಾತದಿಂದ ನಿಧನ

ಧಾರವಾಡ : ಚುನಾವಣೆ ಹಿನ್ನೆಲೆ ಮತಗಟ್ಟೆ ಅಧಿಕಾರಿಗಳ ತರಬೇತಿ ಮುಗಿಸಿ ಮನೆಗೆ ತೆರಳ್ತಿದ್ದಾಗ ಹೃದಯಾಘಾತಗೊಂಡು ಶಿಕ್ಷಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಮತಗಟ್ಟೆ ಅಧಿಕಾರಿಗಳ ತರಬೇತಿ ಪಡೆಯುತ್ತಿದ್ದ ಶಿಕ್ಷಕ ಮಲ್ಲಪ್ಪ ಭೀಮಪ್ಪ ಸೋನಾರ (54) ಮೃತ ಶಿಕ್ಷಕ ಎಂದು ಗುರುತಿ ಸಲಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಆರ್ಯ ಭಟ್ಟ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಪ್ಪ ವಿಧಾನ ಸಭೆ ಚುನಾವಣೆ ಹಿನ್ನೆಲೆ ಮತಗಟ್ಟೆ ಅಧಿಕಾರಿಗಳ ತರಬೇತಿ ಪಡೆಯು ತ್ತಿದ್ದರು. ಧಾರವಾಡ ಜೆಎಸ್‌ಎಸ್ ಕಾಲೇಜಿನಲ್ಲಿ 71- ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಆಯೋಜಿಸಲಾಗಿತ್ತು.

ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನೇಮಕಗೊಂಡ ಶಿಕ್ಷಕ ತರಬೇತಿ ಮುಗಿಸಿ ಮನೆಗೆ ಬರುತ್ತಿದಂತೆ ಹೃದಯಾಘಾತ ಗೊಂಡು ಮೃತಪಟಿದ್ದಾರೆ.