Saturday, 24th May 2025

ಶೈಕ್ಷಣಿಕ ಅಧ್ಯಯನಕ್ಕಾಗಿ ಸಿಂಡಿಕೇಟ್ ಸದಸ್ಯರು ಪ್ರವಾಸ

ತುಮಕೂರು : ತುಮಕೂರು ವಿಶ್ವವಿದ್ಯಾನಿಯದಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧ್ಯಯನಕ್ಕಾಗಿ ವಿವಿಧ ವಿಶ್ವವಿದ್ಯಾ ಲಯಗಳ ಭೇಟಿ ಮಾಡುವ ನಿಟ್ಟಿನಲ್ಲಿ ಸಿಂಡಿಕೇಟ್ ಸದಸ್ಯರು ಉತ್ತರಕಾಂಡ್ ನ ಡೂನ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದಾರೆ.

ಡೂನ್ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಮಂಗಲ್ ಸಿಂಗ್ ಮಂಡ್ರವಾಲ್ ಅವರನ್ನು ಭೇಟಿಮಾಡಿ ಹಲವು ಆಡಳಿತಾತ್ಮಕ ವಿಷಯಗಳ ಬಗ್ಗೆ ಸುದೀರ್ಘವಾದ ಚರ್ಚೆಯನ್ನು ನಡೆಸಿ ನಂತರ ಕುಲಪತಿಗಳಾದ ಪ್ರೊ. ಸುರೇಖ ದಂಗ್‌ವಾಲ್ ಅವ ರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

ಭೇಟಿ ಸಂದರ್ಭದಲ್ಲಿ ಸಮಿತಿಯು ಡೂನ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಡಾ. ರಾಜರ್ಷಿ ಮಜುಂದಾರ್, ಜೈವಿಕ ವಿಜ್ಞಾನ ವಿಭಾಗದ ಅಖಿಲೇಶ್ ದವೇರಿಯಾ, ಪರಿಸರ ವಿಜ್ಞಾನ ವಿಭಾಗದ ಡಾ. ಶ್ರೀಧರ್, ಭೌತಶಾಸ್ತ್ರ ವಿಭಾಗದ ಡಾ. ಹಿಮಾನಿ, ವಿದೇಶಿ ಭಾಷಾ ಕಲಿಕಾ ವಿಭಾಗದ ಮುಖ್ಯಸ್ಥರಾದ ಡಾ. ಚೇತನ್ ಪೊಕ್ರಿಯಾಲ್, ಡಾ. ಅರುಣ್ ಕುಮಾರ್, ಡಾ. ವಿಕಾಸ್ ಶರ್ಮ, ಡಾ. ಪ್ರೀತಿ ಮಿಶ್ರ ಸೇರಿದಂತೆ ವಿವಿಧ ವಿಭಾಗದ ಅಧ್ಯಾ ಪಕರು, ವಿಜ್ಞಾನಿಗಳನ್ನು ಭೇಟಿ ಮಾಡಿ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾ ಯಿತು.

ಈ ಸಮಿತಿಯಲ್ಲಿ ತುಮಕೂರು ಸಿಂಡಿಕೇಟ್ ಸದಸ್ಯರಾದ ಟಿ.ಎಸ್. ಸುನೀಲ್ ಪ್ರಸಾದ್, ಪ್ರಸನ್ನ ಕುಮಾರ್, ರಾಜು, ರಾಜು ಲೋಚನ, ದೇವರಾಜು, ಮಲ್ಲಿಕಾರ್ಜುನ ಪಾಟೀಲ್ ಮತ್ತು ಉಪ-ಕುಲಸಚಿವ ಡಾ. ಸುರೇಶ್ ತೆರಳಿದ್ದಾರೆ.