Monday, 12th May 2025

ಗುಡಿಬಂಡೆ ಇಒ ಅಮಾನತು, ಬಾಗೇಪಲ್ಲಿ ಇಒ ವಿಚಾರಣೆಗೆ ಆದೇಶ

ಚಿಕ್ಕಬಳ್ಳಾಪುರ: ಕೇಬಲ್‌ ‌ಅಳವಡಿಕೆಗೆ ಅನುಮತಿ ನೀಡಲು ಲಂಚ ಪಡೆದ ಆರೋಪ ದಲ್ಲಿ ಗುಡಿಬಂಡೆ ತಾಲ್ಲೂಕು ಪಂಚಾಯಿತಿ ಕರ‍್ಯನರ‍್ವಹಣಾಧಿಕಾರಿ ರವೀಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.

ರವೀಂದ್ರ ಮೇಲ್ನೋಟಕ್ಕೆ ರ‍್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ‌ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಕರ‍್ಯನರ‍್ವಹಣಾಧಿಕಾರಿ ಎಸ್‌. ಆನಂದ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ತೀರ‍್ಮಾನಿಸ ಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪಕರ‍್ಯರ‍್ಶಿ ಆದೇಶದಲ್ಲಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್‌ನಲ್ಲಿ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ ಪಿಡಿಒ ಡಿ.ಎಸ್. ಮಂಜುನಾಥ್, ಬೀಚಗಾನಹಳ್ಳಿ ಪಿಡಿಒ ಎಂ.ಎನ್. ಬಾಲಕೃಷ್ಣ, ಸೋಮೇನಹಳ್ಳಿ ಪಿಡಿಒ ಎನ್. ವೆಂಕಟಾಚಲಪತಿ, ಬಾಗೇಪಲ್ಲಿ ತಾಲ್ಲೂಕು ಗೂಳೂರು ಪಂಚಾಯಿತಿ ಪಿಡಿಒ ಬಾಬಾಸಾಬ, ಚೇಳೂರು ಪಿಡಿಒ ಗೌಸ್‌ಪೀರ್ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಮಾನತುಗೊಳಿಸಿದ್ದರು.

 
Read E-Paper click here