Wednesday, 21st May 2025

ಮಾಜಿ ಜಿ.ಪಂ ಸದಸ್ಯ ಪಂಚಾಕ್ಷರಿ ಉಚ್ಚಾಟಿಸಬೇಕೆಂದು ಮನವಿ

ಚಿಕ್ಕನಾಯಕನಹಳ್ಳಿ : ಜೆ.ಸಿ.ಎಂ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮಾಜಿ ಜಿ.ಪಂ ಸದಸ್ಯ ಪಂಚಾಕ್ಷರಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡುವುದಾಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ ಹೇಳಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಪಂಚಾಕ್ಷರಿ ಅವರು ಪೂರ್ವಗ್ರಹ ಪೀಡಿತರಾಗಿ ರಾಜಕೀಯ ದ್ವೇಷ ದಿಂದ ನಮ್ಮ ನಾಯಕರ ಬಗ್ಗೆ ವಿರೋಧಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ನಮ್ಮನ್ನು ವಲಸಿಗರು ಎಂದು ಟೀಕಿಸುವ ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪ್ರಚಾರ ನಡೆಸಿ ಮತ ವನ್ನು ಹಾಕಿಸಿದ್ದಾರೆ. ಇಂಥವರು ನಮಗೆ ನೀತಿ ಹೇಳಲು ಬರುತ್ತಾರೆ ಇವರು ನಮ್ಮ ಪಕ್ಷಕ್ಕೆ ಅಗತ್ಯವಿಲ್ಲ ಇವರನ್ನು ಕೂಡಲೇ ಉಚ್ಚಾಟಿಸಬೇಕೆಂದರು.

ಲಿಂಗಾಯಿತರಲ್ಲಿ ಒಡಕಿಗೆ ಪ್ರಯತ್ನ
ಲಿಂಗಾಯಿತರಲ್ಲಿ ಒಡಕನ್ನು ಮೂಡಿಸಲು ಪಂಚಾಕ್ಷರಿ ಪ್ರಯತ್ನಿಸುತ್ತಿದ್ದಾರೆ. ಕೆಪಿಟಿಸಿ ಎಲ್‌ನ ಲೈನ್ ಎಳೆಯುವ ವಿಚಾರವಾಗಿ ಅನಾವಶ್ಯಕವಾಗಿ ಜೆಸಿಎಂ ಹೆಸರಿಗೆ ಕಳಂಕ ತರುತ್ತಿರುವ ಅವರು ಕೂಡಲೇ ಕ್ಷಮೆಯಾಚಿಸಬೇಕು. ಗೋಡೆಕೆರೆ ಗ್ರಾಮಪಂಚಾಯಿತಿ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಬಹುದಾಗಿದ್ದರೂ ಜೆಡಿಎಸ್‌ನವರಿಗೆ ಬೆಂಬಲಿಸಿ ನಮ್ಮ ಅಭ್ಯರ್ಥಿ ಸೋಲುವಂತೆ ಮಾಡಿದರು. ಎಂದು ಅಗಸರಹಳ್ಳಿ ಶಿವರಾಜ್ ಕಿಡಿಕಾರಿದರು.

ಕಾರ್ಯದರ್ಶಿ ನಿರಂಜನ್‌ಮೂರ್ತಿ ಮಾತನಾಡಿ ೨೦೧೮ರಲ್ಲಿ ಹಾಕಿದ ಕ್ಯಾಸೆಟ್‌ನ್ನೇ ಮತ್ತೊಮ್ಮೆ ಹಾಕಿರುವ ಪಂಚಾಕ್ಷರಿಯವರು ಗೊಂದಲದಲ್ಲಿದ್ದಾರೆ. ಹೇಮಾವತಿ ಹಾಗು ರಾಷ್ಟಿçÃಯ ಹೆದ್ದಾರಿ ಕಾಮಾಗಾರಿ ಕಳಪೆಯಿಂದ ಕೂಡಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಗರಣಗಳ ಆಡಿಯೋ ಬಿಡುಗಡೆ ಮಾಡುತ್ತೇನೆಂಬ ಬೆದರಿಕೆಗೆ ಯಾರು ಅಂಜುವುದಿಲ್ಲ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಅಧ್ಯಕ್ಷ ಇಟ್ಟಿಗೆ ರಂಗಸ್ವಾಮಿ, ಪುರಸಭಾ ನಾಮಿನಿ ಸದಸ್ಯ ಮಿಲಿಟರಿ ಶಿವಣ್ಣ, ಶಂಕರಣ್ಣ, ನಂದಿಹಳ್ಳಿ ಶಿವಣ್ಣ, ಬಸವರಾಜು ಮಾತನಾಡಿದರು. ಯುವಮೋರ್ಚ ಅಧ್ಯಕ್ಷ ಅರಳೀಕೆರೆ ಉಮೇಶ್, ಶೆಟ್ಟಿಕೆರೆ ವಿನಯ್, ಕಳಸೇಗೌಡ ಹಾಗು ಇತರರಿದ್ದರು.