Sunday, 11th May 2025

Suicide: ಶಿಡ್ಲಘಟ್ಟದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಶಿಡ್ಲಘಟ್ಟ: ತಾಲ್ಲೂಕಿನ ಭೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿಂತಾಮಣಿ ತಾಲೂಕಿನ ಸೀತರಮಪುರ ಗ್ರಾಮದವರಾದ ನವೀನ್ (22) ಮತ್ತು 15 ವರ್ಷದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು. ಮೃತ ನವೀನ್ ಚಾಲಕ ವೃತ್ತಿ ಮಾಡುತ್ತಿದ್ದು, ಬಾಲಕಿ ಸರಕಾರಿ ಶಾಲೆ ಯಲ್ಲಿ ೯ನೇ ತರಗತಿ ಓದುತ್ತಿದ್ದಳು. ಒಂದೇ ಗ್ರಾಮ, ಒಂದೇ ಸಮುದಾಯದವರಾದ ಇಬ್ಬರು ಪರಸ್ಪರ ಪ್ರೀತಿಯಲ್ಲಿ ದ್ದರು.

ವಿಷಯ ತಿಳಿದ ಬಾಲಕಿಯ ಪೋಷಕರು ಯುವಕನ ವಿರುದ್ಧ ಇದೇ ಮಾರ್ಚ್ 30ರಂದು ಶಿಡ್ಲಘಟ್ಟ ತಾಲ್ಲೂಕಿನ ಭಟ್ಲಹಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಕೂಡಲೇ ಆರೋಪಿ ನವೀನ್ ಪೊಲೀಸರ ಕೈಗೆ ಸಿಗದೆ ಕೆಲ ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ. ನಂತರ ಭಟ್ಲಹಳ್ಳಿ ಪೊಲೀಸರು ಕಾರ್ಯಾ ಚರಣೆ ನಡೆಸಿ ಗೌನಿಪಲ್ಲಿ ಗ್ರಾಮದಲ್ಲಿದ್ದ ನವೀನ್‌ನನ್ನು ಹಿಡಿದು ಜೈಲಿಗೆ ಕಳಿಸಿದ್ದರು.

ಇದೆಲ್ಲ ಬೆಳವಣಿಗೆಗಳ ಬಳಿಕ ಮತ್ತೆ ಭೇಟಿಯಾಗಿದ್ದ ಪ್ರೇಮಿಗಳು, ಸೆ.೧೩ರ ಸಂಜೆ ಭೀರಪ್ಪನಹಳ್ಳಿ ಅರಣ್ಯ ಪ್ರದೇಶಕ್ಕೆ ತೆರಳಿ ಒಂದೇ ಕುಣಿಕೆಗೆ ಇಬ್ಬರೂ ಕೊರಳೊಡ್ಡಿದ್ದಾರೆ.

Leave a Reply

Your email address will not be published. Required fields are marked *