Sunday, 11th May 2025

ಸೂಫಿ ಸಂತ ಹಝರತ್ ಶೇಖ್ ತಾಜುದ್ದೀನ್ ಜುನೈದಿ ನಿಧನ

ಕಲಬುರಗಿ : ತಾಜ್ ಬಾಬಾ ಎಂದೇ ಖ್ಯಾತ ದೇಶದ ಮುಂಚೂಣಿ ಸೂಫಿ ಸಂತ ಹಝರತ್ ಶೇಖ್ ತಾಜುದ್ದೀನ್ ಜುನೈದಿ ಅನಾರೋಗ್ಯದಿಂದ ಮೃತಟ್ಟಿದ್ದಾರೆ.

ದೇಶದ ಮುಂಚೂಣಿ ಸೂಫಿ ಸಂತ ಹಝರತ್ ಶೇಖ್ ತಾಜುದ್ದೀನ್ ಅಪಾರ ಅನುಯಾಯಿಗಳನ್ನು ಹೊಂದಿದ್ದರು. ಜುಮಾ ನಮಾಝ್​ ಬಳಿಕ ಕಲಬುರಗಿ ಯ ಜುನೈದೇ ದರ್ಬಾರ್​ನಲ್ಲಿ ದಫನ್ ಕಾರ್ಯ ನಡೆಯಲಿದೆ.

ತಾಜುದ್ದೀನ್ ಜುನೈದಿ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಶ್ರೀಯುತರು, ಕಲಬುರಗಿಯಲ್ಲಿ ಹುಟ್ಟಿದರೂ, ಕೋಲಾರವನ್ನು ತಮ್ಮ ಸೇವಾನೆಲೆಯನ್ನಾಗಿ ಮಾಡಿಕೊಂಡಿದ್ದರು. ಹಝ್ರತ್‌ ಶೈಖ್‌ ತಾಜುದ್ದೀನ್‌ ಜುನೈದೀ ಅವರು ನಮ್ಮನ್ನಗಲಿರುವುದು ಅಪಾರ ದುಃಖ ಉಂಟು ಮಾಡಿದೆ ಎಂದು ಹೇಳಿದ್ದಾರೆ.