ಚಿಕ್ಕಬಳ್ಳಾಪುರ : ಬೀದಿ ನಾಯಿಗಳ ಹಾವಳಿಯಿಂದಾಗಿ ರೋಸಿ ಹೋಗಿದ್ದ ನಗರವಾಸಿಗಳಿಗೆ ಬೀದಿ ನಾಯಿಗಳ ಸಂತಾನಹರಣಕ್ಕೆ ಚಾಲನೆ ನೀಡುವ ಮೂಲಕ ನಗರಸಭೆ ಅಧ್ಯಕ್ಷ ಗಜೇಂದ್ರ ಉಪಾಧ್ಯಕ್ಷ ನಾಗರಾಜ್ ಸಿಹಿ ಸುದ್ದಿ ನೀಡಿದ್ದಾರೆ.
ಹೌದು ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರಸಭೆಯ ಯಾವ ಬೀದಿ ಗಲ್ಲಿಗೆ ಹೋದರೂ ಹಿಂಡು ಹಿಂಡಾಗಿ ಬೀದಿ ನಾಯಿಗಳೇ ಕಂಡು ಬರುತ್ತಿದ್ದವು.ಇವು ತಮ್ಮ ಪಾಡಿಗೆ ತಾವಿದ್ದರೆ ಯಾರಿಗೂ ಏನೂ ತೊಂದರೆಯಿರಲಿಲ್ಲ.
ಆದರೆ ದಾರಿಯಲ್ಲಿ ಹೋಗಿ ಬರುವವರ ಮೇಲೆ, ಮಕ್ಕಳು ಮುದುಕರು ಮಹಿಳೆಯರ ಮೇಲೆ ಏಕಾಏಕಿ ದಾಳಿ ಮಾಡಿ ಅಪಾಯವನ್ನು ತರುತ್ತಿದ್ದವು.ಇದು ನಗರವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬೀದಿನಾಯಿ ಹಾವಳಿ ಬಗ್ಗೆಯೇ ಪ್ರತಿಬಾರಿ ಚೆರ್ಚೆ ನಡೆದು ಟೆಂಡರ್ ಹಂತಕ್ಕೆ ಬಂದು ಸುಮ್ಮನಾಗುತ್ತಿತ್ತು. ಆದರೆ ಈಗಿನ ಅಧ್ಯಕ್ಷ ಗಜೇಂದ್ರ ಸಾರ್ವಜನಿಕರು ಜೀವಕ್ಕೆ ಬೆಲೆ ನೀಡಿ ಬೀದಿ ನಾಯಿ ಹಿಡಿದು ಸಂತಾನ ಹರಣ ಮಾಡಲು ಟೆಂಡರ್ ಪೈನಲ್ ಮಾಡಿರುವ ಕಾರಣ ಗುರುವಾರ ಕಾರ್ಯಾಚರಣೆ ಪ್ರಾರಂಭ ವಾಗಿದೆ.
ಈ ಕಾರ್ಯಚರಣೆ ೩೧ ವಾರ್ಡುಗಳಲ್ಲಿ ಯಶಸ್ವಿಯಾಗಿ ಮುಂದುವರೆದಿದ್ದೇ ಆದಲ್ಲಿ ನಗರವಾಸಿಗಳು ಎದುರಿಸುತ್ತಿದ್ದ ಬೀದಿನಾಯಿಗಳ ಹಾವಳಿಗೆ ಕಡಿವಾಣ ಬೀಳುವುದಂತೂ ಸತ್ಯ.
ಈಬಗ್ಗೆ ಮಾತನಾಡಿರುವ ನಗರಸಭೆ ಅಧ್ಯಕ್ಷ ಗಜೇಂದ್ರ ಬೀದಿನಾಯಿಗಳ ಹಾವಳಿ ಬಗ್ಗೆ ನಗರಸಭೆಗೆ ಸಾರ್ವಜನಿಕರು ಸದಸ್ಯರಿಂದ ಸಾಕಷ್ಟು ದೂರುಗಳು ಬಂದಿದ್ದವು.ನಮ್ಮ ಆಡಳಿತಾವಧಿಯಲ್ಲಿ ನಗರವಾಸಿಗಳ ನೆಮ್ಮದಿಯ ಜೀವನಕ್ಕೆ ಮೊದಲ ಆಧ್ಯತೆ ನೀಡುವುದೇ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂಬುದು ಸಮೀಕ್ಷೆಯಿಂದ ತಿಳಿದಿದೆ.
ಈ ಪೈಕಿ, ಕನಿಷ್ಟ ೨ ಸಾವಿರ ನಾಯಿಗಳಿಗಾದರೂ ಸಂತಾನಹರಣ ಚಿಕಿತ್ಸೆ ಮಾಡಿಸುವ ಉದ್ದೇಶದಿಂದ ಟೆಂಡರ್ ನೀಡಲಾಗಿದ್ದು ಇಂದಿನಿAದ ೧ನೇ ವಾರ್ಡ್ನಿಂದಲೇ ಚಾಲನೆ ನೀಡಲಾಗಿದೆ.ನಗರದ ಸಿಟಿಜನ್ ಕ್ಲಬ್‌ನಲ್ಲಿ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಲಾಗಿದೆ.ಚಿಕಿತ್ಸೆ ನಂತರ ೩ ದಿನಗಳ ಕಾಲ ಆರೈಕೆಗೂ ವ್ಯವಸ್ಥೆ ಮಾಡಲಾಗಿದ್ದು ನಂತರ ಹಿಡಿದ ಜಾಗದಲ್ಲಿಯೇ ಬಿಡುವುದಾಗಿ ತಿಳಿಸಿದರು.
ಈ ವೇಳೆ ಉಪಾಧ್ಯಕ್ಷ ನಾಗರಾಜ್ ಮಾತನಾಡಿ ೪ ತಿಂಗಳ ಕಾಲ ಡಾಗ್ ಎರಾಡಿಕೇಷನ್ ಅಭಿಯಾನ ನಡೆಯಲಿದೆ.ಈ ಹಿಂದೆ ೮ ಬಾರಿ ಟೆಂಡರ್ ಕರೆದಿದ್ದರೂ ಯಾರೂ ಬಂದಿರಲಿಲ್ಲ. ಈಬಾರಿ ೨೦ ಲಕ್ಷಕ್ಕೆ ಟೆಂಡರ್ ಅಂತಿಮವಾಗಿದೆ. ೨೦೦೦ ಸಾವಿರ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ನಗರ ವಾಸಿಗಳಿಗೆ ಬೀದಿನಾಯಿಗಳಿಗೆ ಕಡಿವಾಣ ಹಾಕಲಾಗುವುದು ಎಂದರು.
ಆಯುಕ್ತ ಮನ್ಸೂರ್ ಅಲಿ,೧ನೇ ವಾರ್ಡ್ ಸದಸ್ಯೆ ಶಶಿಕಿರಣ್ ಇತರರು ಇದ್ದರು.