Saturday, 10th May 2025

ಗ್ರಾಮಸ್ಥರ ಕಣ್ಣಿಗೆ ಬಿದ್ದ ನೀರಿನ ಪೈಪ್ ಕಳ್ಳರು!

-ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಪರಾರಿ
ಗದಗ: ಕಳೆದ ಹಲವು ದಿನಗಳಿಂದ ಹನಿ ನೀರಾವರಿಯ ಪೈಪ್‌ಗಳು ಕಳ್ಳತನ ವಾಗುತ್ತಿದ್ದವು.
ಮಂಗಳವಾರ ರಾತ್ರಿ ಜಿಲ್ಲೆಯ ಮುಂಡರಗಿ ತಾಲೂಕಿ‌ನ ಜಂತ್ಲಿ ಶಿರೂರು ಗ್ರಾಮ ದಲ್ಲಿ ಹನಿ ನೀರಾವರಿಯ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್‌ ಗಳನ್ನು ಕಳ್ಳತನ ಮಾಡಿ ಟ್ರ್ಯಾಕ್ಟರ್‌ನಲ್ಲಿ ತುಂಬುವಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾರೆ.
ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟುತ್ತಿದ್ದಂತೆ ನೀರಿನ ಪೈಪ್ ಕಳ್ಳರು, ಪೈಪ್‌ಗಳನ್ನು ತುಂಬಿದ್ದ ಟ್ರ್ಯಾಕ್ಟರ್‌ನ್ನು ಅಲ್ಲೇ ಬಿಟ್ಟು ಪರಾರಿ ಯಾಗಿದ್ದಾರೆ. ನೀರಿನ ಪೈಪ್ ಕಳ್ಳರ ಹಾವಳಿಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.