ಚಿಕ್ಕನಾಯಕನಹಳ್ಳಿ: ನೇಕಾರ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ನೇಕಾರಿಕೆ ಉಳಿವಿಗಾಗಿ ತಮಿಳುನಾಡು, ಆಂಧ್ರ ಪ್ರದೇಶ, ಮಾದರಿ ಯೋಜನೆಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ತುಮಕೂರು ಜಿಲ್ಲ್ಷಾ ನೇಕಾರ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಎಸ್ಟಿ ಸೇರ್ಪಡೆಗೆ ಹೋರಾಟ ವಿಚಾರ ಹಾಗು ಪ್ರತಿಭಾ ಪುರಸ್ಕಾರ ಕುರಿತು ತುಮಕೂರು ಜಿಲ್ಲಾ ನೇಕಾರ ಸಂಘದಿ0ದ ನಡೆಸಿದ ಸುದ್ದಿಗೊಷ್ಠಿ ಯಲ್ಲಿ ಅವರು ಮಾಹಿತಿ ನೀಡಿದರು.
ದೇವಾಂಗ, ಪದ್ಮಶಾಲಿ, ಕುರುಹೀನಶೆಟ್ಟಿ ಸಮಾಜವನ್ನೊಳಗೊಂಡ ೨೭ ನೇಕಾರ ಪಂಗಡಗಳಿದ್ದು, ನೇಕಾರರ ಸಮಸ್ಯೆಗಳ ಕುರಿ ತಂತೆ ಸರಕಾರದ ಗಮನ ಸೆಳೆಯಲು ತುಮಕೂರಿನ ಮಹಾವೀರ ಜೈನ ಭವನದಲ್ಲಿ ನ.೧೩ ರಂದು ನೇಕಾರ ಸಮುದಾಯಗಳ ಎಸ್ಟಿ ಸೇರ್ಪಡೆಗೆ ಹಕ್ಕೋತ್ತಾಯ ಸಮಾವೇಶ ಹಾಗು ಪ್ರತಿಭಾ ಪುರಸ್ಕಾರ ಆಯೋಜಿಸ ಲಾಗಿದೆ.
ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕಾರ್ಯಕ್ರಮದ ಭಾಗ ವಾಗಲಿದ್ದಾರೆ. ತಾಲ್ಲೂಕು ಹಾಗು ಜಿಲ್ಲಾ ಕೇಂದ್ರಗಳಲ್ಲಿ ನೇಕಾರರ ಮಕ್ಕಳಿಗೆ ಹಾಸ್ಟಲ್ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಯಾವುದಾದರೂ ವಿಧಾನಸಭಾ ಕ್ಷೇತ್ರದಿಂದ ಚುನಾ ವಣೆಯಲ್ಲಿ ಸ್ಪರ್ಧಿಸಲು ನೇಕಾರರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ ರಾಜ್ಯದ ನೇಕಾರರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೆ ತೀವ್ರ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಶಿಕ್ಷಣ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಹಿಂದುಳಿದಿದ್ದು ಎಸ್ಟಿ ಸೇರ್ಪಡೆಗೆ ಸರಕಾರದ ಮೇಲೆ ಒತ್ತಡ ಹಾಕಲು ನಾವೇಲ್ಲರೂ ಹೋರಾಟ ನಡೆಸಬೇಕಿದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಗುಬ್ಬಿ ಸಮೀಪ ಮಂಜೂರು ಮಾಡಿದ್ದ ಟೆಕ್ಸ್ಟೈಲ್ ಪಾರ್ಕ್ ಇದುವರೆಗೂ ಕಾರ್ಯರಂಭ ಮಾಡಿದೇ ಇರುವುದು ಬೇಸರ ತಂದಿದೆ ಎಂದರು.
ನೇಕಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
೨೦೨೧- ೨೨ ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ ೮೦ ಕ್ಕಿಂತ ಹೆಚ್ಚು ಅಂಕಗಳಿಸಿದ ನೇಕಾರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಸ್ಥಳೀಯ ನೇಕಾರ ಮುಖಂಡರನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ರಾಜ್ಯ ನೇಕಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಿಂಗರಾಜು ಮನವಿ ಮಾಡಿದರು.
ಉಪಾಧ್ಯಕ್ಷ ಕರಿಯಪ್ಪ. ಸಹ ಕಾರ್ಯದರ್ಶಿ ಯೋಗಾನಂದ, ಸಂಘಟನಾ ಕಾರ್ಯದರ್ಶಿ ಅನಿಲ್ಕುಮಾರ್, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಸಿ.ಡಿ. ಚಂದ್ರಶೇಖರ್, ಮುಖಂಡರಾದ ಕೋಡಿ ಲೋಕೇಶ್, ಮಂದಾಲಿ ರಂಗನಾಥ್, ಪುರುಷೋತ್ತಮ, ಜವಾಜಿ ರಂಗನಾಥ್, ರಮೇಶ್, ದೇವರಾಜು, ದಿವಾಕರ್, ರಂಗಸ್ವಾಮಿ, ಯತೀಷ್, ರಂಗಸ್ವಾಮಿ ಗೂಳೂರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.