Wednesday, 14th May 2025

ಶೃಂಗೇರಿ ಶಾರದಾ ಪೀಠ ದರ್ಶನಕ್ಕೆ ವಸ್ತ್ರ ಸಂಹಿತೆ

ಚಿಕ್ಕಮಗಳೂರು: ಮಲೆನಾಡಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾ ಪೀಠಕ್ಕೆ ಆಗಮಿಸುವ ಭಕ್ತರು ಶ್ರೀಮಠದ ಗುರುಗಳ ದರ್ಶನಕ್ಕೆ ವಸ್ತ್ರ ಸಂಹಿತೆಯನ್ನು ಇನ್ನು ಮುಂದೆ ಅನುಸರಿಸುವ ಕುರಿತು ಶ್ರೀಮಠದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ.

ಶ್ರೀಗಳ ದರ್ಶನ ಹಾಗೂ ಪಾದಪೂಜೆಗೆ ತೆರಳುವ ಭಕ್ತರು ಆಗಸ್ಟ್ 15 ರಿಂದ ಭಾರತೀಯ ಸಂಪ್ರದಾಯದಂತೆ ವಸ್ತ್ರ ಧರಿಸಿ ಶ್ರೀಗಳ ದರ್ಶನ ಪಡೆಯಬೇಕು. ಪುರುಷರು ಧೋತಿ ಮತ್ತು ಶಲ್ಯ ಹಾಗೂ ಉತ್ತರೀಯವನ್ನು ಧರಿಸಬೇಕು. ಮಹಿಳೆಯರು ಸೀರೆ, ರವಿಕೆ, ಸಲ್ವಾರ್ ಜತೆಗೆ ದುಪ್ಪಟ ಅಥವಾ ಲಂಗ ದಾವಣಿ ಧರಿಸಿ ಶ್ರೀಗಳ ದರ್ಶನ ಪಡೆಯಬಹುದು ಎಂದು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ಭಾರತೀಯ ಸಂಪ್ರದಾಯದ ಉಡುಗೆಗಳನ್ನು ಹೊರತುಪಡಿಸಿ ಇತರೆ ಉಡುಗೆ ತೊಟ್ಟು ಬಂದಲ್ಲಿ ಗುರುನಿವಾಸದ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *