Wednesday, 14th May 2025

ಶಿಕ್ಷಣ ಸಚಿವರ ಮನೆಗೆ ನುಗ್ಗಿ ದಾಂಧಲೆ ಮಾಡಿರುವವರಿಗೆ ಗುಂಡಿಕ್ಕಿ: ಸೊಗಡು ಆಗ್ರಹ

ತುಮಕೂರು: ಶಿಕ್ಷಣ ಸಚಿವ ನಾಗೇಶ್ ಅವರ ಮನೆಗೆ ಎನ್​ಎಸ್​ಯುಐ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿರುವ ಪ್ರಕರಣ ದಲ್ಲಿ ಭಾಗಿಯಾದವರನ್ನು ಕಂಡಲ್ಲಿ ಗುಂಡಿಕ್ಕಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ಈ ಪ್ರಕರಣ ಪ್ರೀ ಪ್ಲಾನ್​​ ಮಾಡಿಕೊಂಡಿರು ವಂತಿದೆ. ಪ್ರಕರಣದಲ್ಲಿ 6 ಮಂದಿ ಮುಸಲ್ಮಾನರು, ಇನ್ನುಳಿದಂತೆ ಹಿಂದೂಗಳು ಭಾಗಿಯಾಗಿದ್ದಾರೆ. ಇವರೆಲ್ಲ ಏನು ಸಿವಿಲ್ ಉಗ್ರಗಾಮಿಗಳಾ? ಹಾಸನ, ದಾವಣಗೆರೆ, ಬೆಂಗಳೂರು ಸೇರಿ ಹಲವೆಡೆಯಿಂದ ಜನರನ್ನು ಕಳುಹಿಸಿ ಕೃತ್ಯ ನಡೆಸಿದ್ದಾರೆ ಎಂದು ದೂರಿದರು.

ಸಚಿವರ ಮಗ ಶಾಕ್‌ಗೊಳಗಾಗಿ ಮನೆಯಿಂದ ಹೊರ ಬಂದಿಲ್ಲ. ಸರಕಾರಕ್ಕೆ ಪೊಲೀಸರಿಗೆ ನೇರವಾಗಿ ಹೇಳುತ್ತೇನೆ, ಇಂತಹವರಿಗೆ ಕೇವಲ ಶಿಕ್ಷೆ ಅಲ್ಲ, ಕಂಡಲ್ಲಿ ಗುಂಡಿಕ್ಕಿ ಎಂದರು. ನಾಲ್ಕರಲ್ಲಿ ಇನ್ನೆರಡು ವಾಹನ ಎಲ್ಲಿ, ಅದರಲ್ಲಿ ವೆಪನ್ ಇದ್ದವು. ವೆಪನ್ ಇದ್ದ ವೆಹಿಕಲ್ ಅನ್ನು ಈವರೆಗೂ ಹಿಡಿದಿಲ್ಲ ಎಂದರು.

ದೇಶದ ನೈಜ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ತಿಳಿಸಲಾಗಿದೆ. ಇತಿಹಾಸವನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ ಎಂದರು.