Wednesday, 14th May 2025

Snake Bite: ನಲ್ಲಸಾನಂಪಲ್ಲಿಯಲ್ಲಿ ಹಾವು ಕಚ್ಚಿ ರೈತ ಸಾವು

Snake bite

ಬಾಗೇಪಲ್ಲಿ: ಹಾವು ಕಚ್ಚಿ (Snake Bite) ರೈತ ಮೃತಪಟ್ಟಿರುವ ಘಟನೆ ತಾಲೂಕಿನ ಪುಲ್ಲಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲಸಾನಂಪಲ್ಲಿ ಗ್ರಾಮದಲ್ಲಿ ಜರುಗಿದೆ. ವೆಂಕಟರಮಣ ಬಿನ್ ಮದ್ದಿರೆಡ್ಡಿ (52) ಹಾವು ಕಚ್ಚಿ ಮೃತಪಟ್ಟ ರೈತ.

ಹೊಲದಲ್ಲಿ ಹಸುಗಳಿಗೆ ಹುಲ್ಲು ಕಟಾವು ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Road Accident: ಕೆಎಸ್‌ಆರ್‌ಟಿಸಿ ಬಸ್‌ಗೆ ಟಿಪ್ಪರ್ ಡಿಕ್ಕಿ; ಬಸ್ಸಿಂದ ಕೆಳಗೆ ಬಿದ್ದ ಮಹಿಳೆಗೆ ಗಂಭೀರ ಗಾಯ

ಈ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.