ಆಶ್ಚರ್ಯಕರ ಸೀಮಿತ ಕೊಡುಗೆ: ಮೊದಲ 33,333 ಗ್ರಾಹಕರು ಉಚಿತ 3- ವರ್ಷ ಸ್ಟಾಂಡರ್ಡ್ ಮೇಂಟೆನೆನ್ಸ್ ಪ್ಯಾಕೇಜ್ (ಎಸ್.ಎಂ.ಪಿ.) ಪಡೆಯುತ್ತಾರೆ
ಅಭೂತಪೂರ್ವ ಪ್ರತಿಕ್ರಿಯೆ: 160,000+ ಆಸಕ್ತಿಯ ಅಭಿವ್ಯಕ್ತಿಗಳು ಕೈಲಾಕ್ ಹ್ಯಾಂಡ್-ರೈಸರ್ ಗಳು ಮತ್ತು ಕೈಲಾಕ್ ಕ್ಲಬ್ ಸದಸ್ಯರಿಂದ ವ್ಯಕ್ತವಾಗಿದೆ
ಕೈಲಾಕ್ ಉನ್ನತ ಕಾರ್ಯಕ್ಷಮತೆ, ದಕ್ಷ ಮತ್ತು ವಿಶ್ವಾಸಾರ್ಹ 1.0 ಟಿ.ಎಸ್.ಐ. ಎಂಜಿನ್ ನಿಂದ ಸನ್ನದ್ಧವಾಗಿದ್ದು ಅದು ಸಿಕ್ಸ್-ಸ್ಪೀಡ್ ಮ್ಯಾನ್ಯುಯಲ್ ಅಥವಾ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್, ನಾಲ್ಕು ವೇರಿಯೆಂಟ್ ಗಳು ಮತ್ತು ಏಳು ಬಣ್ಣದ ಆಯ್ಕೆಗಳನ್ನು ಹೊಂದಿದೆ.
ಆಧುನಿಕ, ದಿಟ್ಟ ಮತ್ತು ಮಸ್ಕುಲರ್ ಕೈಲಾಕ್ ನಿಜಕ್ಕೂ ಭಾರತೀಯ ರಸ್ತೆಗಳ ಮೇಲೆ ಯೂರೋಪಿನ ತಂತ್ರಜ್ಞಾನವನ್ನು ಪ್ರಜಾಸತ್ತೀ ಯಗೊಳಿಸಿದೆ.
ಅತ್ಯುತ್ತಮ ಕ್ಯಾಬಿನ್ ಸುರಕ್ಷತೆಯನ್ನು 25ಕ್ಕೂ ಹೆಚ್ಚು ಸ್ಟಾಂಡರ್ಡ್ ಸುರಕ್ಷತೆಯ ವಿಶೇಷತೆಗಳನ್ನು ಎಲ್ಲ ಕೈಲಾಕ್ ವೇರಿಯೆಂಟ್ ಗಳಲ್ಲೂ ಹೊಂದಿದ್ದು ಅದರಲ್ಲಿ ಆರು ಏರ್ ಬ್ಯಾಗ್ಸ್ ಮತ್ತು ಹಲವಾರು ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತೆಯ ವಿಶೇಷತೆಗಳಿವೆ.
ಬುಕಿಂಗ್ ಗಳು ಇಂದಿನಿಂದ ಮಧ್ಯಾಹ್ನ 4ರಿಂದ ಪ್ರಾರಂಭವಾಗಿದ್ದು ಡೆಲಿವರಿಗಳು ಜನವರಿ 27, 2025ರಿಂದ ಪ್ರಾರಂಭ
ಅತ್ಯಂತ ಕಡಿಮೆ ನಿರ್ವಹಣೆಯ ವೆಚ್ಚ 5 ವರ್ಷಗಳವರೆಗೆ ಕಿ.ಮೀ.ಗೆ ರೂ.0.24 ಮೊದಲ 33,333 ಗ್ರಾಹಕರಿಗೆ
ಸಮಗ್ರ ಪರೀಕ್ಷೆಗೆ ಒಳಪಟ್ಟಿದೆ: 800,000 ಕಿ.ಮೀ.ಗಳನ್ನು ಮೀರಿ ಪರೀಕ್ಷೆಗೆ ಒಳಪಟ್ಟಿದ್ದು ಅದು ಚಂದ್ರನ ಬಳಿಗೆ ಹೋಗಿ ಹಿಂದಿರುಗುವುದಕ್ಕಿಂತ ಹೆಚ್ಚಿನದಾಗಿದೆ
ಹುಬ್ಬಳ್ಳಿ: ಸ್ಕೋಡಾ ಆಟೊ ಇಂಡಿಯಾದ ಮೊಟ್ಟಮೊದಲ ಸಬ್-4ಮೀ ಎಸ್.ಯು.ವಿ. ವಲಯಕ್ಕೆ ಪ್ರವೇಶವಾದ ಕೈಲಾಕ್ ಈಗ ತನ್ನ ಇಡೀ ಶ್ರೇಣಿಯ ವೇರಿಯೆಂಟ್ ಗಳು ಮತ್ತು ಬೆಲೆಯೊಂದಿಗೆ ಹೊರಬಂದಿದೆ. ಈ ಕೈಲಾಕ್- ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವಿಧಗಳಲ್ಲಿ ಬಂದಿದೆ. ಈ ಎಸ್.ಯು.ವಿ.ಯು ಕೈಲಾಕ್ ಕ್ಲಾಸಿಕ್ ಟ್ರಿಮ್ ಗೆ ರೂ.7.89* ಲಕ್ಷಗಳ ಪ್ರಾರಂಭಿಕ ಬೆಲೆ ಹೊಂದಿದೆ.
ಟಾಪ್-ಆಫ್-ದಿ-ಲೈನ್ ಕೈಲಾಕ್ ಪ್ರೆಸ್ಟೀಜ್ ಎಟಿ ರೂ.14,40,000 ಬೆಲೆ ಹೊಂದಿದೆ. ಇದಲ್ಲದೆ 33,333 ಗ್ರಾಹಕರು ಉಚಿತ 3- ವರ್ಷ ಸ್ಟಾಂಡರ್ಡ್ ಮೇಂಟೆನೆನ್ಸ್ ಪ್ಯಾಕೇಜ್ (ಎಸ್.ಎಂ.ಪಿ.) ಪಡೆಯುತ್ತಾರೆ. ಕೈಲಾಕ್ ಬುಕಿಂಗ್ ಗಳು ಇಂದು ಮಧ್ಯಾಹ್ನ 4 ಗಂಟೆಗೆ ಪ್ರಾರಂಭವಾಗಿದ್ದು ಡೆಲಿವರಿಗಳು ಜನವರಿ 27, 2025ರಿಂದ ಪ್ರಾರಂಭವಾಗುತ್ತವೆ. ಕೈಲಾಕ್ ಈಗಾಗಲೇ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದ್ದು ಕೈಲಾಕ್ ಹ್ಯಾಂಡ್-ರೈಸರ್ಸ್, ಕೈಲಾಕ್ ಕ್ಲಬ್ ಸದಸ್ಯರು ಮತ್ತು ಡೀಲರ್ ವಿಚಾರಣೆಗಳಲ್ಲಿ 160,000 ಆಸಕ್ತಿಗಳನ್ನು ಇಲ್ಲಿಯವರೆಗೆ ಪಡೆದಿದೆ.
ಸ್ಕೋಡಾ ಆಟೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಪೆಟ್ರ್ ಜನೇಬಾ, “ಹೊಚ್ಚಹೊಸ ಕೈಲಾಕ್ ಭಾರತದಲ್ಲಿ ಸ್ಕೋಡಾ ಬ್ರಾಂಡ್ ಗೆ ಹೊಸ ಯುಗದ ಪ್ರಾರಂಭಕ್ಕೆ ಸಾಕ್ಷಿಯಾಗಿದೆ. ಸ್ಕೋಡಾ ಕೈಲಾಕ್ ನಮಗೆ ಮಾತ್ರವಲ್ಲದೆ ಈ ವಲಯಕ್ಕೇ ಗೇಮ್ ಚೇಂಚರ್ ಆಗಿದೆ ಮತ್ತು ಭಾರತೀಯ ರಸ್ತೆಗಳ ಮೇಲೆ ಯೂರೋಪಿನ ತಂತ್ರಜ್ಞಾನವನ್ನು ಪ್ರಜಾಸತ್ತೀಯಗೊಳಿಸುವುದಲ್ಲದೆ ಗ್ರಾಹಕರ ಅನುಭವವನ್ನು ಮರು ವ್ಯಾಖ್ಯಾನಿಸುತ್ತದೆ. ನಾವು ಮೊದಲ 33,333 ಗ್ರಾಹಕರಿಗೆ ಈ ವರ್ಗದ ಅತ್ಯುತ್ತಮ ಮಾಲೀಕತ್ವದ ಅನುಭವವನ್ನು ಪ್ರಕಟಿಸಿದ್ದೇವೆ. ಕೈಲಾಕ್ ಈಗ 2024ರಲ್ಲಿ ಅಪಾರ ಉತ್ಸಾಹ ಮತ್ತು ಸಂಭ್ರಮ ಸೃಷ್ಟಿಸಿದ್ದು ಅದು ನವೆಂಬರ್ ತಿಂಗಳಲ್ಲಿ ವಿಶ್ವದಲ್ಲಿ ಪ್ರದರ್ಶನಗೊಂಡು ಉನ್ನತ ಮಟ್ಟಕ್ಕೆ ಏರಿತು. ಈ ಎಸ್.ಯು.ವಿ.ಯು ಜಾಗತಿಕ ವಿನ್ಯಾಸದ ಕ್ಯೂಗಳು, ಸರಿಸಾಟಿ ಇರದ ಡ್ರೈವಿಂಗ್ ಡೈನಮಿಕ್ಸ್, ರಾಜಿಯಿರದ ಸುರಕ್ಷತೆ, ಅಸಂಖ್ಯ ವಿಶೇಷತೆಗಳು, ವಿಶಾಲ ಮತ್ತು ಕಾರ್ಯ ನಿರ್ವಹಣೆಯ ಒಳಾಂಗಣವು ಈ ಶ್ರೇಣಿಯ ಮೌಲ್ಯಯುತ ಬೆಲೆಯೊಂದಿಗೆ ಬಂದಿದೆ. ಕೈಲಾಕ್ ಹೊಸ ಮಾರುಕಟ್ಟೆಗಳಿಗೆ ಪ್ರವೇಶಿಸುವ ನಮ್ಮ ಗುರಿಗೆ ಮತ್ತಷ್ಟು ಉತ್ತೇಜನ ನೀಡುವ ಮೂಲಕ ಹೊಸ ಗ್ರಾಹಕರನ್ನು ಸ್ಕೋಡಾ ಕುಟುಂಬಕ್ಕೆ ತರುತ್ತದೆ ಮತ್ತು ಭಾರತದಲ್ಲಿ ನಮ್ಮ ಕಾರು ಉಪಸ್ಥಿತಿಯನ್ನು ಸದೃಢಗೊಳಿಸುತ್ತದೆ ಎಂಬ ವಿಶ್ವಾಸ ನಮ್ಮದು” ಎಂದರು.
ಹೇರಳ ಆಯ್ಕೆಗಳು
ಕೈಲಾಕ್ ಬಿಡುಗಡೆಗೆ ಎರಡು ಟ್ರಾನ್ಸ್ ಮಿಷನ್ ಗಳು, ನಾಲ್ಕು ವೇರಿಯೆಂಟ್ ಗಳು ಮತ್ತು ಏಳು ಬಣ್ಣಗಳಲ್ಲಿ ಲಭ್ಯವಿದೆ. ಇದು ಉನ್ನತ ಕಾರ್ಯಕ್ಷಮತೆ, ದಕ್ಷ ಮತ್ತು ವಿಶ್ವಾಸಾರ್ಹ 1.0 ಟಿ.ಎಸ್.ಐ. ಎಂಜಿನ್ ನಿಂದ ಸನ್ನದ್ಧವಾಗಿದ್ದು 85ಕೆಡಬ್ಲ್ಯೂ ಶಕ್ತಿ ಮತ್ತು 178ಎನ್ಎಂ ಟಾರ್ಕ್ ಉತ್ಪಾದಿಸುತ್ತಿದ್ದು ಸಿಕ್ಸ್-ಸ್ಪೀಡ್ ಮ್ಯಾನ್ಯುಯಲ್ ಅಥವಾ ಸಿಕ್ಸ್-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೊಮ್ಯಾಟಿಕ್ ಆಯ್ಕೆ ಹೊಂದಿದೆ. ಗ್ರಾಹಕರು ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಟಾಪ್-ಆಫ್-ದಿ-ಲೈನ್ ಪ್ರೆಸ್ಟೀಜ್ ನಾಲ್ಕು ವೇರಿಯೆಂಟ್ ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಟಾರ್ನೆಡೊ ರೆಡ್, ಬ್ರಿಲಿಯೆಂಟ್ ಸಿಲ್ವರ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್, ಲಾವಾ ಬ್ಲೂ, ಡೀಪ್ ಬ್ಲಾಕ್ ಮತ್ತು ಕೈಲಾಕ್ ಎಕ್ಸ್ ಕ್ಲೂಸಿವ್ ಆಲಿವ್ ಗೋಲ್ಡ್ ಒಳಗೊಂಡು ಏಳು ಬಣ್ಣಗಳಲ್ಲಿ ಲಭ್ಯ.
ಕ್ಲಾಸಿಕ್ ವ್ಯಾಲ್ಯೂ
ಕೈಲಾಕ್ ಮತ್ತು ಸ್ಕೋಡಾ ಕುಟುಂಬಕ್ಕೆ ಪ್ರವೇಶ ನೀಡುವ ಕ್ಲಾಸಿಕ್ ವೇರಿಯೆಂಟ್ ನಲ್ಲೂ ಗ್ರಾಹಕರು ಆರು ಏರ್ ಬ್ಯಾಗ್ಸ್ ಮತ್ತು 25ಕ್ಕೂ ಹೆಚ್ಚು ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತೆಯ ವಿಶೇಷತೆಗಳನ್ನು ಸ್ಟಾಂಡರ್ಡ್ ಆಗಿ ಪಡೆಯುತ್ತಾರೆ. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆರು ಏರ್ ಬ್ಯಾಗ್ಸ್, ಸ್ಟೀರಿಂಗ್ ವ್ಹೀಲ್ ಗೆ ಟಿಲ್ಟ್ ಮತ್ತು ರೀಚ್ ಅಡ್ಜಸ್ಟ್ ಮೆಂಟ್, ಹೆಡ್ ರಿಸ್ಟ್ರೈಂಟ್ಸ್ ಮತ್ತು ಎಲ್ಲ ಐದು ಸೀಟುಗಳಿಗೂ ಥ್ರೀ-ಪಾಯಿಂಟ್ ಸೀಟ್ ಬೆಲ್ಟ್ ಗಳು, ಎಲೆಕ್ಟ್ರಿಕ್ ಮಿರರ್ ಗಳು, ರಿಯರ್ ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ಡ್ರೈವರ್ಸ್ ಡೆಡ್ ಪೆಡಲ್, ಆಟೊಮ್ಯಾಟಿಕ್ ಸ್ಪೀಡ್ ಸೆನ್ಸಿಟಿವ್ ಸೆಂಟ್ರಲ್ ಲಾಕಿಂಗ್ ಮತ್ತು ಫುಲ್ ಎಲ್.ಇ.ಡಿ. ಲೈಟಿಂಗ್ ಗಳು ಸ್ಟಾಂಡರ್ಡ್ ವಿಶೇಷತೆಗಳಲ್ಲಿ ಹೊಂದಿವೆ.
ಸಿಗ್ನೇಚರ್ ವಿವರ
ಕ್ಲಾಸಿಕ್ ಸುರಕ್ಷತೆ ಮತ್ತು ಅನುಕೂಲದೊಂದಿಗೆ ಹೆಚ್ಚು ಸನ್ನದ್ಧವಾಗಿದ್ದರೆ ಕೈಲಾಕ್ ಸಿಗ್ನೇಚರ್ ವೇರಿಯೆಂಟ್ ಟೈರ್ ಪ್ರೆಷರ್ ಮಾನಿಟರಿಂಗ್, ಕ್ರೂಸ್ ಕಂಟ್ರೋಲ್, ಆರ್ 16 ಅಲಾಯ್ಸ್, ವೈರ್ಡ್ ಆಂಡ್ರಾಯಿಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ, ಕೂಲ್ಡ್ ಗ್ಲೋವ್ ಬಾಕ್ಸ್, ಯು.ಎಸ್.ಬಿ-ಸಿ ಸಾಕೆಟ್ ಗಳು, 17.7 ಸೆಂ.ಮೀ. (7-ಇಂಚು) ಸ್ಕೋಡಾ ಟಚ್ ಇನ್ಫೊಟೈನ್ಮೆಂಟ್ ಸಿಸ್ಟಂ, ಮಲ್ಟಿಫಂಕ್ಷನಲ್ ಸ್ಟೀರಿಂಗ್ ವ್ಹೀಲ್, ಅಡ್ಜಸ್ಟಬಲ್ ರಿಯರ್ ಎಸಿ ವೆಂಟ್ ಗಳು ಇತ್ಯಾದಿ ಹೊಂದಿದೆ.
ಸಿಗ್ನೇಚರ್+ ಮತ್ತಷ್ಟು ಮೌಲ್ಯ ಹೆಚ್ಚಳ
ಸಿಗ್ನೇಚರ್+ ಟಾಪ್-ಆಫ್-ದಿ-ಲೈನ್ ವೇರಿಯೆಂಟ್ ಲ್ಲಿ ನೀವು ನಿರೀಕ್ಷಿಸುವ ಪ್ರತಿಯೊಂದೂ ಒಳಗೊಂಡಿದ್ದು ಮಿಡ್-ವೇರಿಯೆಂಟ್ ಮೌಲ್ಯ ನೀಡುತ್ತದೆ. ಈ ಅತ್ಯಂತ ನಿರೀಕ್ಷೆಯ ವೈರ್ ಲೆಸ್ ಆಂಡ್ರಾಯಿಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ ಈ ವೇರಿಯೆಂಟ್ ನಲ್ಲಿ ಲಭ್ಯವಿದ್ದು ಇದು 25.6 ಸೆಂ.ಮೀ. (10.1 ಇಂಚು) ಸ್ಕೋಡಾ ಟಚ್ ಇನ್ಫೊಟೈನ್ಮೆಂಟ್ ಸಿಸ್ಟಂ ಹೊಂದಿದೆ. ಇದರ ಟ್ರಿಮ್ 20.32 ಸೆಂ.ಮೀ. (8-ಇಂಚು) ವರ್ಚುಯಲ್ ಕಾಕ್ ಪಿಟ್ ಅನ್ನು ಚಾಲಕನಿಗೆ ನೀಡುತ್ತದೆ. ರಿಯರ್-ವ್ಯೂಕ್ಯಾಮರಾ, ಕ್ಲೈಮೆಟ್ರಾನಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ. ಆಟೊಮ್ಯಾಟಿಕ್ ಹೆಡ್ ಲ್ಯಾಂಪ್ಸ್, ಹಿಲ್-ಹೋಲ್ಡ್ ಕಂಟ್ರೋಲ್, ಸುಸ್ಥಿರ ಬಿದಿರಿನ ನಾರಿನಿಂದ ರೂಪಿಸಿದ ಡ್ಯಾಶ್ ಬೋರ್ಡ್ ಪ್ಯಾಡ್, ಎಲೆಕ್ಟ್ರಿಕಲಿ ಮಡಚಬಲ್ಲ ಹೊರಾಂಗಣ ಮಿರರ್ ಕಾರ್-ಲಾಕ್ ಇತ್ಯಾದಿಗಳನ್ನು ಹೊಂದಿದೆ.
ಔನ್ನತ್ಯದಲ್ಲಿ ಪ್ರೆಸ್ಟೀಜ್
ಟಾಪ್-ಆಫ್-ದಿ-ಲೈನ್ ಪ್ರೆಸ್ಟೀಜ್ ಅವರ ಎಸ್.ಯು.ವಿ.ಯಲ್ಲಿ ಪ್ರತಿ ವಿಶೇಷತೆಯೂ ಇರಬೇಕೆಂದು ಬಯಸುವ ಗ್ರಾಹಕರಿಗೆ ಪೂರೈಸುವ ಕೈಲಾಕ್ ಆಗಿದೆ. ಈ ಕೈಲಾಕ್ ಟಾಪ್-ಡ್ರಾವರ್ ವೇರಿಯೆಂಟ್ ಎಲೆಕ್ಟ್ರಿಕ್ ಸನ್ ರೂಫ್ ಅನ್ನು ಆಂಟಿ-ಪಿಂಚ್ ತಂತ್ರಜ್ಞಾನ, ಆರ್17 ಡ್ಯುಯಲ್ ಟೋನ್ ಅಲಾಯ್ ವ್ಹೀಲ್ಸ್ ಆಟೊ ಹೆಡ್ ಲ್ಯಾಂಪ್ಸ್ ಮತ್ತು ವೈಪರ್ಸ್, ಎಲ್.ಇ.ಡಿ. ಫಾಗ್ ಲ್ಯಾಂಪ್ಸ್ ಕಾರ್ನರಿಂಗ್ ಕಾರ್ಯದೊಂದಿಗೆ ಹೊಂದಿದೆ. ಸ್ಕೋಡಾ ಕ್ರಿಸ್ಟಲೈನ್ ಎಲ್.ಇ.ಡಿ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಆಂಬಿಯೆಂಟ್ ಇಂಟೀರಿಯರ್ ಲೈಟಿಂಗ್ ಇತರೆ ವಿಶೇಷತೆಗಳೊಂದಿಗೆ ಲಭ್ಯವಿದೆ. ಈ ವರ್ಗದ ಪ್ರಥಮ ಸಿಕ್ಸ್-ವೇ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಫ್ರಂಟ್ ಸೀಟ್ಸ್ ಸೀಟ್ ವೆಂಟಿಲೇಷನ್ ನೊಂದಿಗೆ ಹೊಂದಿವೆ. ಅಲ್ಲದೆ ಸಿಗ್ನೇಚರ್ ಮತ್ತು ಅದರ ಮೇಲ್ಪಟ್ಟ ಎಲ್ಲ ವೇರಿಯೆಂಟ್ ಗಳಲ್ಲೂ ಸಿಕ್ಸ್-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೊಮ್ಯಾಟಿಕ್ ಆಯ್ಕೆ ಇದ್ದು ಪ್ರೆಸ್ಟೀಜ್ ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್-ಶಿಫ್ಟರ್ಸ್ ಅನ್ನು ತಕ್ಷಣದ ಮ್ಯಾನ್ಯುಯಲ್ ಗೇರ್ ಶಿಫ್ಟ್ ಗಳಿಗೆ ಹೊಂದಿದೆ.
ಈ ವರ್ಗದ ಅತ್ಯುತ್ತಮ ಮಾಲೀಕತ್ವ
ವಿಸ್ತಾರ ಶ್ರೇಣಿಯ ವೇರಿಯೆಂಟ್ ಕೊಡುಗೆಗಳೊಂದಿಗೆ ಮೌಲ್ಯ ಮತ್ತು ತಂತ್ರಜ್ಞಾನದ ಸಮತೋಲನ ಹೊಂದಿದ್ದು ಸುರಕ್ಷತೆಯಲ್ಲಿ ರಾಜಿಯಿಲ್ಲ. ಕೈಲಾಕ್ ಕಾಯ್ದಿರಿಸುವ ಮೊದಲ 33,333 ಗ್ರಾಹಕರು ಉಚಿತ 3-ವರ್ಷ ಸ್ಟಾಂಡರ್ಡ್ ಮೇಂಟೆನೆನ್ಸ್ ಪ್ಯಾಕೇಜ್ ಪಡೆಯುತ್ತಾರೆ. ಈ ಪ್ಯಾಕೇಜ್ ಪರಿಣಾಮಕಾರಿಯಾಗಿ ಕೈಲಾಕ್ ನಿರ್ವಹಣೆಯ ವೆಚ್ಚವನ್ನು ಪ್ರತಿ ಕಿಲೋಮೀಟರ್ ಗೆ ರೂ.0.24ಕ್ಕೆ ತರುತ್ತದೆ, ಇದರಿಂದ ವಾಹನವು ತನ್ನ ವರ್ಗದಲ್ಲಿ ಅತ್ಯುತ್ತಮ ಕಡಿಮೆ ನಿರ್ವಹಣೆ ವೆಚ್ಚ ಹೊಂದುವಂತೆ ಮಾಡಿದೆ.
ಇದರೊಂದಿಗೆ ಕೈಲಾಕ್ 3 ವರ್ಷ/100,000 ಕಿ.ಮೀ.ಗಳಲ್ಲಿ ಯಾವುದು ಮೊದಲೋ ಅದಕ್ಕೆ ಸ್ಟಾಂಡರ್ಡ್ ವಾರೆಂಟಿ ಹೊಂದಿದೆ. ಇದರೊಂದಿಗೆ ಕೈಲಾಕ್ ಆರು ವರ್ಷ ಆಂಟಿ-ಕರೋಷನ್ ವಾರೆಂಟಿಯನ್ನು ಎಲ್ಲ ಶ್ರೇಣಿಗೂ ಸ್ಟಾಂಡರ್ಡ್ ಆಗಿ ನೀಡುತ್ತದೆ. ಈ ಎಸ್.ಯು.ವಿ.ಯು ಕುಶಾಕ್ ಮತ್ತು ಸ್ಲೇವಿಯಾದಂತೆ ಎಂಕ್ಯೂಬಿ-ಎ0-ಐಎನ್ ಪ್ಲಾಟ್ ಫಾರಂ ಆಧರಿಸಿದೆ. ಇದನ್ನು ಭಾರತ ಮತ್ತು ಝೆಕ್ ರಿಪಬ್ಲಿಕ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು ಕಡಿಮೆ ನಿರ್ವಹಣಾ ವೆಚ್ಚಗಳಿಗೆ ಆದ್ಯತೆ ನೀಡಿದ್ದರೂ ಸ್ಕೋಡಾದ ಡೈನಮಿಕ್ಸ್ ಮತ್ತು ಸುರಕ್ಷತೆಯ ಸಾಂಪ್ರದಾಯಿಕ ಗುಣಗಳನ್ನು ಉಳಿಸಿಕೊಂಡಿದೆ.
ಕೈಲಾಕ್
ಬೆಲೆ ರೂ.(ಎಕ್ಸ್-ಶೋರೂಂ)
1.0 ಟಿ.ಎಸ್.ಐ. ಎಂ.ಟಿ.
1.0 ಟಿ.ಎಸ್.ಐ. ಎ.ಟಿ.
ಕ್ಲಾಸಿಕ್
₹ 7,89,000
ಸಿಗ್ನೇಚರ್
₹ 9,59,000
₹ 10,59,000
ಸಿಗ್ನೇಚರ್ +
₹ 11,40,000
₹ 12,40,000
ಪ್ರೆಸ್ಟೀಜ್
₹ 13,35,000
₹ 14,40,000
*ಎಲ್ಲ ಬೆಲೆಗಳೂ ಎಕ್ಸ್-ಶೋರೂಂ ಭಾರತ
**ತಾತ್ಕಾಲಿಕ ಮಾಹಿತಿ- ಪ್ರಕಟಿಸಲಾದ ಕಾರ್ಯಕ್ಷಮತೆ, ಶಕ್ತಿ ಮತ್ತು ಅಳತೆಗಳನ್ನು ಕಾರು ಅನುಮೋದನೆಯಾದ ನಂತರ ಪ್ರಕಟಿಸಲಾಗುತ್ತದೆ