Sunday, 11th May 2025

ನಾಯಿತರ ಓಡಿಸ್ಬಿಟ್ರು ನನ್ನ: ರಾಜೀನಾಮೆ ನೀಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಬೇಸರ

ಶಿರಸಿ: ನನ್ನ ರಾಜೀನಾಮೆಗೆ ಮತ್ತು ನನಗೆ ಟಿಕೆಟ್ ಸಿಗದಂತೆ ಮಾಡಿದ್ದು ಸಿಟಿ ರವಿ ಎಂದು ನೇರವಾಗಿ ಆರೋಪಿಸಿದ ಶಾಸಕ ಎಂ ಪು ಕುಮಾರ್ ಸ್ವಾಮಿ ಶುಕ್ರವಾರ ಶಿರಸಿಗೆ ಆಗಮಿಸಿ ಸ್ಪೀಕರ್ ಕಾಗೇರಿಗೆ ರಾಜೀನಾಮೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಅವರು ಅವರ ಸ್ವಾರ್ಥ ಹಿತಕ್ಕಾಗಿ ನನ್ನ ಬಲಿ ಕೊಟ್ಟರು. ನಾನು ಇಷ್ಟು ಅವಧಿಯಲ್ಲಿ ಶಾಸಕನಾದರೂ ಆಂತರಿಕೆ ಭಿನ್ನಾಭಿಪ್ರಾಯಗಳ ಸಹಿಸಿಕೊಂಡಿದ್ದೆ , ರೈತರಪರ ಹೋರಾಡಿದ್ದು ಮತ್ತು ನನ್ನ ಒಳ್ಳೆಯತನ ದುರುಪಯೋಗಪಡಿಸಿ ಕೊಂಡವರು ರವಿಯವರು. ನನ್ನವೊಳ್ಳೆಯತನಕ್ಕೆ ಬೆಲೆ ಇದೆ ನಾನು ಮತ್ತೆ ಆರಿಸಿ ಬರುವ ಆತ್ಮವಿಶ್ವಾಸ ಇದೆ ಎಂದರು.

ರಾಜ್ಯ ದಲ್ಲಿ ನಾಯಕರೇ ಇಲ್ಲದಂತಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಅವರೇ ಬಂದು ಗೊಂದಲ ಬಗೆ ಹರಿಸುವ ಸ್ಥಿತಿ ಬಂದಿದೆ. ಮೂಡಗೆರೆ ಕ್ಷೇತ್ರದ ಶಾಸಕರ ನಡೆಸಿದರು. ಯಡ್ಯೂರಪ್ಪ ಅವರು ಪೋನ್ ಬಂದ್ ಮಾಡಿ ಕೊಂಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ೫೦-೭೦ ಸ್ಥಾನ ಬಿಜೆಪಿದು ದಾಟಲ್ಲ ಎಂದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವದಿಲ್ಲ. ಮೂಡಿಗೆರೆಯಲ್ಲಿ ನನ್ನದೇ ಗೆಲುವು, ನಾನೆ ಎಂಎಲ್ ಎ ಎಂದ ಅವರು, ಸೆಕ್ಯುಲರ ಕ್ಣೇತ್ರ. ನಾನಿಲ್ಲದೇ ಇದ್ದರೆ ಜೆಡಿಎಸ್ ಕಾಂಗ್ರೆಸ್ ಗೆಲ್ಲಬೇಕಿತ್ತು. ನಾನು ಸಚಿವರಿಗಿಂತ ಹೆಚ್ಚು ಕೆಲಸ ಮಾಡಿದ್ದೆನೆ ಎನ್ನುವ ಸಮಾಧಾನ ಇದೆ ಎಂದರು. ಬಿಜೆಪಿಯ ಕೆಲವರು ಸಿ.ಟಿ.ರವಿ ಭ್ರಮೆಲಿ ಇದ್ದಾರೆ. ಅದು ಕಳಚುವ ಸಮಯ ದೂರವಿಲ್ಲವೆಂದರು.

*

ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಅನುಭವ ಹೊಂದಿದ ಬಿಜೆಪಿ ಶಾಸಕ ಎಂ ಪಿ ಕುಮಾರ ಸ್ವಾಮಿ ತಮ್ಮ ಹಸ್ತಾಕ್ಷರದಲ್ಲಿ ಕನ್ನಡದಲ್ಲಿಯೇ ಶಾಸಕ ಸ್ಥಾನದ ರಾಜೀನಾಮೆ ಪತ್ರವನ್ನು ಸ್ಪೀಕರ್ ಗೆ ನೀಡಿದ್ದು ವಿಶೇಷವಾಗಿತ್ತು.