Monday, 12th May 2025

ನಾಲ್ಕು ಸಲ ಸೋತವನಿಗೆ ಐದನೇ ಬಾರಿ ಟಿಕೆಟ್: ವೆಂಕಟೇಶ ಹೆಗಡೆ ಅಸಮಾಧಾನ

ಶಿರಸಿ: ವಿಧಾನಸಭಾಕ್ಷೇತ್ರದಲ್ಲಿ ನಾಲ್ಕು ಸಲ ಸೋತವನಿಗೆ ಐದನೇ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿದ ವಿಚಾರಕ್ಕೆ ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೊಸಬಾಳೆಯವರು ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿಯ ಶಿರಸಿ ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಶಿರಸಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೊಸಬಾಳೆ ಹೇಳಿದರು.

ಹೊಸಮುಖ ಕಾಂಗ್ರೆಸ್ ಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಎರಡು ಕಿ.ಮೀ. ರಸ್ತೆ ಮಾಡಿ ತಗಡಿನ ಲೈಟ್ ಕಂಬ ಹಾಕಿದರೇ ಅದೇ ಅಭಿವೃದ್ಧಿ ಎಂದು ಓಡಾಡುವ ಜನಪ್ರತಿ ನಿಧಿಗಳಿದ್ದಾರೆ. ಹಾಗಿದ್ದರೆ ಶಿರಸಿಯಲ್ಲಿ ಬಿ.ಜೆ.ಪಿ. ಮತ್ತೆ ಕಾಂಗ್ರೆಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡಿರುವ ಅನುಮಾನ ಕಾಡುತ್ತಿದೆ ಎಂದರು.

ಭವಿಷ್ಯ ಸತ್ಯವೇ..: ಕಾಗೇರಿಯವರ ಜಾತಕ ನೋಡಿ ಇತ್ತೀಚೆಗೆ ಭವಿಷ್ಯ ನುಡಿದಿರುವ ಕಮಲಾಕರ ಭಟ್ ಅವರು ಈ ಬಾರಿ ಕ್ಷೇತ್ರ ದಲ್ಲಿ ಕಾಂಗ್ರೆಸ್ನಿಂದ ಹೊಸಮುಖ ಕಾಣಲಿದೆ ಎಂದು ಹೇಳಿದ್ದರು. ಆದರೆ ಗುರುವಾರ ಕಾಂಗ್ರೆಸ್ ನಿಂದ ಭೀಮಣ್ಣನಿಗೆ ಟಿಕೆಟ್ ನೀಡು ತ್ತಿದ್ದಂತೆಯೇ ಭವಿಷ್ಯ ನುಡಿದಿರುವುದು ತಪ್ಪಿದೆ ಎನ್ನಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಟಿಕೆಟ್ ಆಕಾಂಕ್ಷಿ ಹೊಸಬಾಳೆಯವರು ತಾವು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂದು ಘೋಷಿಸಿದ್ದರು