Saturday, 10th May 2025

Sirsi News: ನಾಟಕದ ಕುರಿತು, ಪರಿಚಯಿಸಿ ಪ್ರತಿಭೆಗಳ ಹೊರತರುವ ಕಾರ್ಯವಾಗಲಿ

ಶಿರಸಿ: ಗ್ರಾಮೀಣ ಭಾಗದ ಕಲಾವಿದರ, ಪ್ರತಿಭೆಗಳ ಕಷ್ಟಗಳ ಅರಿತು ಬೇಕಿರುವ ಸಹಾಯ ಮಾಡಿ, ಸಂಘ, ಸಂಸ್ಥೆಗಳು ಬೆಳೆಯುವ ನಿಟ್ಟಿನಲ್ಲಿ ಒಂದೊಂದು ನಾಟಕವನ್ನು ಅವರಿಗೆ ಮಾಡಿಸಿ ಕೊಡುವ ಕಾರ್ಯವನ್ನು ರಂಗಾಯಣ ಮಾಡಲಿದೆ ಎಂದು ನಾಟಕಕಾರ ಡಾ. ರಾಜು ತಾಳಿಕೋಟಿ ಹೇಳಿದರು.

ಇಂದು ನಗರದ ನೆಮ್ಮದಿಧಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ರಂಗ ಶಿಕ್ಷಕರು, ರಂಗ ಶಾಲೆ ಬೇಕಿರುವುದಾಗಿ ನಾವು ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ ಎಂದರು.
ಪೌರಾಣಿ, ಐತಿಹಾಸಿಕ ನಾಟಕಗಳ ಜನರತೆದುರು ತೆರೆದಿಡುವ ಕಾರ್ಯವನ್ನು ನಾಟಕಕಾರರು ಮಾಡಬೇಕಿದೆ. ಇಂದಿನ ಯುವ ಪೀಳಿಗೆಗೆ ನಾಟಕದ ಕುರಿತು, ಪರಿಚಯಿಸಿ ಪ್ರತಿಭೆಗಳನ್ನು ಹೊರತರುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ರಂಗಾಯಣ ಕಾರ್ಯಪ್ರವೃತ್ತವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಶಿಕಲಾ ಹುಡೇದ, ಚಂದ್ರು ಉಡುಪಿ ಇದ್ದರು.

ಇದನ್ನೂ ಓದಿ: Sirsi News: ರಿಂಗ್ ಸ್ಪಾಟ್ ರೋಗ: ರೈತರಿಗೆ ತೊಂದರೆ