ಶಿರಸಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಿರಂತರ ಹೋರಾಟ ಕೈಗೊಂಡ ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಪ್ರತ್ಯೇಕ ಜಿಲ್ಲೆಗಾಗಿ ಇಂದು ತಮ್ಮ ಧ್ವನಿ ಎತ್ತಿದ್ದಾರೆ.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಒಂದು ಜಿಲ್ಲೆ ಒಂದು ಮೆಡಿಕಲ್ ಕಾಲೇಜ್ ಎಂದಿರುವ ಕಾರಣ ಈಗಾಗಲೇ ನಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂದರೆ ಮೆಡಿಕಲ್ ಕಾಲೇಜ್ ಬೇಕು. ಮೆಡಿಕಲ್ ಕಾಲೇಜ್ ಬೇಕೆಂದರೆ ನಮಗೆ ಪ್ರತ್ಯೇಕ ಜಿಲ್ಲೆ ಬೇಕಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಗಣ್ಯರಿದ್ದರು.