Saturday, 17th May 2025

ಪಂಕಜನಹಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ

ಚಿಕ್ಕನಾಯಕನಹಳ್ಳಿ: ಇಂದು ತಾಲ್ಲೂಕಿನ ಐತಿಹಾಸಿಕ ಸ್ಥಳವಾದ ಪಂಕಜನಹಳ್ಳಿ ಮಲ್ಲಿಕರ‍್ಜುನ ಸ್ವಾಮಿ ದೇವಾಲಯದಲ್ಲಿ ನವೋದಯ ಪ್ರಥಮ ರ‍್ಜೆಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಒಂದು ದಿನದ ಶ್ರಮಾಧಾನವನ್ನು ಹಮ್ಮಿಕೊಳ್ಳ ಲಾಗಿತ್ತು.

ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಿ. ಎಸ್. ಬಸವಲಿಂಗಯ್ಯನವರ ಕರೆಯ ಮೇರೆಗೆ ಕಾಲೇಜಿನ ನೆಚ್ಚಿನ ವಿದ್ಯರ‍್ಥಿ ತಂಡ ಮತ್ತು ಸಹೋದರ ಪ್ರೀತಿಯ ಬ್ಲೂ ಬಾಯ್ಸ್ ನಮ್ಮ ಜೊತೆ ಕೈಜೋಡಿಸಿ ಇಂದಿನ ಕೆಲಸಕ್ಕೆ ಸಹಕಾರ ನೀಡಿದರು.

ಸುಮಾರು ನೂರಕ್ಕೂ ಅಧಿಕವಾದ ಹೂಗಿಡಗಳನ್ನು ನೀಡುವ ಮೂಲಕ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕರ‍್ಯವನ್ನು ನೆರವೇರಿಸಿ, ಆತ್ಮೀಯವಾಗಿ ಸತ್ಕರಿಸಿದ ದೇವಾಲ ಯದ ಸಮಿತಿಗೂ, ಮಲಗೊಂಡನಹಳ್ಳಿ ಗಂಗಣ್ಣ ನವರ ಮನೆಯ ಚಿತ್ರಾನ್ನ, ಕಾಳಪ್ಪ ಳದ ಸವಿ , ಕೆಲಸ ಮುಗಿದಾಗ ಅಲ್ಲಿದ್ದವರ ಮುಖದಲ್ಲಿ ವಿದ್ಯರ‍್ಥಿಗಳ ಶ್ರಮ ಕಂಡು ಸಿಕ್ಕ ನಗು ನಮಗೆ ಧನ್ಯತಾಭಾವವನ್ನು ನೀಡಿತು ಎಂದು ಪ್ರಭಾರ ಪ್ರಾಂಶುಪಾಲ ರವಿಕುಮಾರ್ ನುಡಿದರು.