Saturday, 10th May 2025

ನಿಶಾನಿ ಕಿರಣ್‌ಕುಮಾರ್ ಆಯ್ಕೆ

ಚಿಕ್ಕನಾಯಕನಹಳ್ಳಿ : ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಪಟ್ಟಣದ ನಿಶಾನಿ ಕಿರಣ್‌ಕುಮಾರ್ ಆಯ್ಕೆಯಾಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ನಿರ್ದೇಶನದ ಮೇರೆಗೆ ಮುಖ್ಯ ಸಂಘಟಕ ರಾಮಚಂದ್ರ ಆದೇಶ ನೀಡಿದ್ದಾರೆ.

ದೇಶದ ಸ್ವಾತಂತ್ರ‍್ಯ ಚಳುವಳಿಯಿಂದ ಹಿಡಿದು ನವ ಭಾರತದ ನಿರ್ಮಾಣದಲ್ಲಿ ಸೇವಾದಳದ ಕೊಡುಗೆ ಇದೆ. ಸೇವಾದಳ ಕಾಂಗ್ರೆಸ್‌ನ ಸಂಘಟನೆ ಯಾಗಿದ್ದು, ಪಕ್ಷ ಯಾವ ಕೆಲಸ ಹೇಳುತ್ತದೆಯೋ ಅದನ್ನು ಮಾಡುತ್ತದೆ. ಕಾಂಗ್ರೆಸ್ ಜೊತೆಗೂಡಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲಿದ್ದು, ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ಅಧ್ಯಕ್ಷ ನಿಶಾನಿ ಕಿರಣ್ ತಿಳಿಸಿದರು.