Saturday, 10th May 2025

ಒಂದು ಕೋಟಿ 27 ಲಕ್ಷ ಮೌಲ್ಯದ ವಸ್ತು ಜಪ್ತಿ

ಕಲಬುರಗಿ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ

ಕಲಬುರಗಿ: ನಗರದ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ, 6 ತಿಂಗಳಲ್ಲಿ 1 ಕೋಟಿ 27 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಚಿನ್ನ 2296 ಗ್ರಾಂ,ಬೆಳ್ಳಿ 10,150 ಗ್ರಾಂ ಸೇರಿದಂತೆ ಒಟ್ಟು 1,27,73,520 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದು, ನವೆಂಬರ್ 2021ರಿಂದ ಹಿಡಿದು ಏಪ್ರಿಲ್ 2022 ರವರೆಗೆ 243 ಪ್ರಕರಣಗಳನ್ನು ದಾಖಲಿಸಿಕೊಂಡು,ಅವುಗಳಲ್ಲಿ 62 ಪ್ರಕರಣಗಳು ಪತ್ತೆ ಹಚ್ಚಿ ಪ್ರಾಪಟಿ೯ ರಿಟರ್ನ್ಸ್ ಮಾಡಿದ್ದಾರೆ.

ಕೋಟಿಗಟ್ಟಲೆ ಮೌಲ್ಯದ ಚಿನ್ನಗಳ ವಾರಸುದಾರರಿಗೆ ಶನಿವಾರ ನಗರದ ಪರೇಡ್ ಮೈದಾನದಲ್ಲಿ ವಾಪಸ್ ಮಾಡಿದರು. ಈ ಸಂದರ್ಭದಲ್ಲಿ ಡಿಸಿಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.