Saturday, 10th May 2025

ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ: ನಮಗ್ಯಾಗೆ ಶಿಕ್ಷೆ? ವ್ಯಾಪಾರಿಗಳ ಆಕ್ರೋಶ

ಶಿವಮೊಗ್ಗ: ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸದಾ ಜನ ಜಂಗುಲಿಯಿಂದ ತುಂಬಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಗಾಂಧಿ ಬಜಾರ್‌ನಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್‌ ಮಾಡಿ, ಮುಂದಿನ ಆದೇಶದ ವರೆಗೆ ಅಂಗಡಿ ತೆರೆಯದಂತೆ ಸೂಚನೆ ನೀಡಲಾಗಿದೆ.

ಈ ನಿಟ್ಟಿನಲ್ಲಿ ಗಾಂಧಿ ಬಜಾರ್‌ನಲ್ಲಿರುವ ಅಂಗಡಿ ಮುಂಗಟ್ಟು ವ್ಯಾಪಾರಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರೋ ಮಾಡಿದ ತಪ್ಪಿಗೆ ನಮಗ್ಯಾಗೆ ಶಿಕ್ಷೆʼ..? ʻನಮ್ಮ ಹೊಟ್ಟೆಗೆ ಹೊಡೆಯುವ ಕೆಲಸವಾಗುತ್ತಿದೆʼ ಎಂದು ಜಿಲ್ಲೆಯ ಅಂಗಡಿ ಮಾಲೀಕರು ತಮ್ಮ ಆಳಲನ್ನು ಹೇಳಿ ಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುತ್ತದೆ.

ನಮಗೆ ದುಡಿದು ತಿನ್ನೋದಕ್ಕೂ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಸರಿಯಾದ ಬೀಟ್‌ ಪೊಲೀಸರು ಇಲ್ಲ. ಸಮಸ್ಯೆ ಆದಾಗ ಮಾತ್ರ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸು ತ್ತಾರೆ.