Monday, 12th May 2025

Samsung: ಭಾರತದ ಏಸಿ ಉದ್ಯಮ ವಿಭಾಗದಲ್ಲಿ ಸಂಚಲನ ಸೃಷ್ಟಿಸುವ ಉದ್ದೇಶದಿಂದ 2025ರಲ್ಲಿ ಹೊಸ ವಿಂಡ್‌ಫ್ರೀ ಏಸಿ ಮಾಡೆಲ್‌ ಗಳ ಬಿಡುಗಡೆ ಮಾಡಲು ಸಿದ್ಧವಾದ ಸ್ಯಾಮ್‌ಸಂಗ್

ಬೆಂಗಳೂರು: ಭಾರತದ ಅಗ್ರಗಣ್ಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ 2025ರಲ್ಲಿ ಒಂದು ಡಝನ್ ಗೂ ಹೆಚ್ಚು ಏರ್ ಕಂಡಿಷನರ್ ಮಾಡೆಲ್ ಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

ದಕ್ಷಿಣ ಕೊರಿಯಾ ಮೂಲದ ಗೃಹೋಪಕರಣಗಳ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಈ ಮೂಲಕ ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸುವ ಯೋಜನೆ ಹೊಂದಿದ್ದು, ರೂಮ್ ಏಸಿ ವಿಭಾಗದಲ್ಲಿನ ಆದ್ಯತೆಯ ಬ್ರ್ಯಾಂಡ್ ಆಗುವ ಉದ್ದೇಶ ಹೊಂದಿದೆ ಎಂಬುದಾಗಿ ಉದ್ಯಮದ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಸ್ಯಾಮ್‌ಸಂಗ್‌ನ ಹೊಸ ಏಸಿ ಮಾಡೆಲ್ ಗಳು ಕಂಪನಿ ಸ್ವಾಮ್ಯದ ಬೀಸ್ಪೋಕ್ ಎಐ ನಿಂದ ಕಾರ್ಯನಿರ್ವಹಿಸಲಿದ್ದು, ಪ್ರೀಮಿಯಂ ಏಸಿಗಳನ್ನು ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಸಿದ್ಧವಾಗಲಿವೆ. ಸ್ಯಾಮ್‌ಸಂಗ್‌ನ ಬೀಸ್ಪೋಕ್ ಎಐ ಶ್ರೇಣಿಯ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ ಮತ್ತು ಹಾಗಾಗಿಯೇ ಸ್ಯಾಮ್‌ಸಂಗ್‌ ಕಂಪನಿಯು ರೂಮ್ ಏರ್ ಕಂಡಿಷನರ್ ವಿಭಾಗದಲ್ಲಿ ಹೊಸ ಮಾಡೆಲ್ ಗಳನ್ನು ಬಿಡುಗಡೆ ಮಾಡುತ್ತಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸ್ಯಾಮ್‌ಸಂಗ್‌ನ ಹೊಸ ಏಸಿ ಶ್ರೇಣಿಯು ಗ್ರಾಹಕರ ಶಕ್ತಿಶಾಲಿ ಏರ್ ಕಂಡಿಷನರ್ ಬೇಕು ಎಂಬ ಬೇಡಿಕೆಯನ್ನು ಪೂರೈಸಲಿದ್ದು, ಈ ಏಸಿಗಳು ವೇಗವಾಗಿ ಮತ್ತು ಅನುಕೂಲಕರವಾಗಿ ವಾತಾವರಣ ತಂಪಾಗಿಸುವ ಶಕ್ತಿ ಹೊಂದಿ ರುತ್ತದೆ. ಜೊತೆಗೆ ವಿದ್ಯುತ್ ಉಳಿತಾಯ ಮತ್ತು ಉತ್ತಮ ಬಾಳಿಕೆ ಬರಲಿದ್ದು, ವಿಶೇಷವಾಗಿ ಅತ್ಯಾಕರ್ಷಕ ವಿನ್ಯಾಸ ಹೊಂದಿರುತ್ತವೆ ಎಂದು ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದಿರುವ ವಿತರಕರು ತಿಳಿಸಿದ್ದಾರೆ. ಭಾರತೀಯ ರೂಮ್ ಏರ್ ಕಂಡಿಷನರ್ (ಆರ್ ಎ ಸಿ) ಉದ್ಯಮವು ಅಭಿವೃದ್ಧಿ ಸಾಧಿಸುತ್ತಿದ್ದು, 2025ರಲ್ಲಿ ವರ್ಷದಿಂದ ವರ್ಷಕ್ಕೆ ಶೇ.20 ರಷ್ಟು ಮಾರಾಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.