Thursday, 15th May 2025

ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದ ಸಹನ

ವಿದ್ಯಾನಿಧಿ ಕಾಲೇಜು: ರಾಜ್ಯಕ್ಕೆ 2ನೇ ಸ್ಥಾನ
ತುಮಕೂರು: ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ವಾಣಿಜ್ಯ ವಿಭಾಗದಲ್ಲಿ ನಗರದ ವಿದ್ಯಾನಿಧಿ ಕಾಲೇಜಿನ  ವಿದ್ಯಾರ್ಥಿನಿ 595 ಅಂಕ ಪಡೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ.
ಸಹನ, ವಾಣಿಜ್ಯ ವಿಭಾಗದಲ್ಲಿ ಟಾಪರ್ ಬಂದ ಪಿಯು ವಿದ್ಯಾರ್ಥಿನಿ. ಕುವೆಂಪು ನಗರದ ರಮೇಶ್, ಶಶಿಕಲಾ ದಂಪತಿಯ ಮಗಳಾಗಿರುವ ಸಹನ. ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಪಡೆದ ವಿದ್ಯಾರ್ಥಿನಿ.
ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ.ಜಯಣ್ಣ, ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ಪ್ರಾಂಶುಪಾಲರು, ಸಿಬ್ಬಂದಿಗಳು ಸಹನಗೆ ಅಭಿನಂದನೆ ಸಲ್ಲಿಸಿದ್ದಾರೆ.