Saturday, 10th May 2025

S Shadakshari honoured: 75ನೇ ವರ್ಷದ ಜನ್ಮದಿನದ ಪ್ರಯುಕ್ತ ನಾಡೋಜ ಎಸ್‌.ಷಡಕ್ಷರಿ ಅವರಿಗೆ ಸನ್ಮಾನ

ಮೈಸೂರು: ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷರು, ಅಂಕಣಕಾರರೂ ಆದ ನಾಡೋಜ ಎಸ್‌.ಷಡಕ್ಷರಿ ಅವರ 75ನೇ ವರ್ಷದ ಜನ್ಮದಿನದಂದು ಅವರು ಜನಿಸಿದ ನಂಜನಗೂಡು ಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕುಟುಂಬದವರು, ಅಭಿಮಾನಿಗಳು, ಹಿತೈಶಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು.

ಬೆಳಗ್ಗೆ ಶ್ರೀಮಠದಲ್ಲಿ, ಶ್ರೀಯುತರ ಹೆಸರಿನಲ್ಲಿ ಸಂಕಲ್ಪ ಪೂರ್ವಕ ಹೋಮ-ಹವನಾದಿ ನಡೆಯಿತು. ಸಂಜೆ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಅಬೀಷೇಕಾದಿ ಪೂಜೆಗಳು ನೆರವೇರಿತು.

ಕುಟುಂಬದವರಾದ ಪುತ್ರ ವೀರೇಂದ್ರ ಷಡಕ್ಷರಿ, ಪುತ್ರಿ ಅರುಣ ಷಡಾಕ್ಷರಿ. ಸ್ನೇಹಿತರಾದ ಡಾ.ಸಿ.ಸೋಮಶೇಖರ್‌, ನಾಗೇಂದ್ರ, ಲೋಕೇಶ್‌ ಹಾಗೂ ಕೃಷ್ಣಮೂರ್ತಿ ಸೇರಿದಂತೆ ರಮಣಶ್ರೀ ಸಂಸ್ಥೆಯ ನೌಕರ ವರ್ಗ ಭಾಗವಹಿಸಿದ್ದರು.

ಇದನ್ನೂ ಓದಿ: #mysore news