Sunday, 11th May 2025

ನಗರದ ಸಮಸ್ಯೆಗಳ ಕುರಿತು ವರದಿ ಕಳುಹಿಸಿ ಪರಿಹರಿಸಲಾಗುವುದು: ಸಚಿವ ಶಂಕರ್ ಪಾಟೀಲ್

ನಗರಸಭೆಯನ್ನು ಮೇಲ್ದೆಜೆಗೇರಿಸಲು ಸರ್ಕಾರದೊಂದಿಗೆ  ಚರ್ಚಿಸಲಾಗುವುದು

ರಾಯಚೂರು: ನಗರಸಭೆಯಲ್ಲಿರುವ ಮತ್ತು ಜಿಲ್ಲೆಯಲ್ಲಿರುವ ಸಮಸ್ಯೆಗಳ ಪರಿಹಾರದ ಕುರಿತು ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿದ್ದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಂಡು, ನಗರಸಭೆ ಯನ್ನು ಮೇಲ್ದರ್ಜೆ ಗೇರಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಅವರಿಂದು ನಗರಸಭೆಯ ಸಭಾಂಗಣದಲ್ಲಿ ಕಲುಷಿತ ನೀರು‌ ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ 10ಲಕ್ಷ ರೂ. ಪರಿಹಾರ ಚೆಕ್ ವಿತರಿಸಿ ನಂತರ ಮಾತನಾಡಿದರು, ರಾಯಚೂರಿನಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಕೆಲವರು ಸಾವನಪ್ಪಿದ್ದು, ಹಲವರು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತುದ್ದು, ಇದೊಂದು ನಾನು ಇದ್ದಾಗ ಆಗಿರುವ ಕಹಿ ಘಟನೆಯಾ ಗಿದ್ದು, ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಇಂದು ಕುಟುಂಬಸ್ಥರಿಗೆ ನಗರಸಭೆಯ ಎಲ್ಲಾ ಸದಸ್ಯರು ಒಮ್ಮತದಿಂದ ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ರೂ. ಕೊಡಲು ತೀರ್ಮಾನಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಕುಟುಂಬಸ್ಥರಿಗೆ ದೈರ್ಯ ತುಂಬುವ ಹಾಗೂ ಆರ್ಥಿಕ ನೆರವು ನೀಡುವ ಕೆಲಸವಾಗಬೇಕಾಗಿದ್ದು, ಜೊತೆಗೆ ಕಲುಷಿತ ನೀರು ಪೂರೈಕೆಗೆ ಕಾರಣವಾದ ಹಾಗೂ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗು ವುದು. ಇನ್ನು ಮುಂದೆ ಈ ರೀತಿಯಾದ ತಪ್ಪುಗಳಾಗದಂತೆ ಅತ್ಯಂತ ಜವಬ್ದಾರಿಯುತ ವಾಗಿ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸಬೇಕು. ಸರ್ಕಾರದ ಮಟ್ಟದಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ನಗರಶಾಸಕ ಡಾ.ಶಿವರಾಜ್ ಪಾಟೀಲ್, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿದಂತೆ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು.