Sunday, 11th May 2025

ಮನೆಗೆ ನುಗ್ಗಿ ನಗದು ಚಿನ್ನಾಭರಣ ದೋಚಿದ ಕಳ್ಳರು

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯನಹಳ್ಳಿ ಗೇಟ್ ಬಳಿ ಘಟನೆ  

ಚಿಂತಾಮಣಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯನಹಳ್ಳಿ ಗೇಟ್ ಬಳಿ ನಡೆದಿದೆ.

ನಾಯನಹಳ್ಳಿ ಗೇಟ್ ಬಳಿ ಇರುವ ಕೃಷ್ಣಾರೆಡ್ಡಿ ಎಂಬುವರು ತಮ್ಮ ಕುಟುಂಬದೊಂದಿಗೆ ಗ್ರಾಮದ ಸ್ವಲ್ಪ ದೂರ ದಲ್ಲಿರುವ ಸ್ವಂತ ತೋಟದಲ್ಲಿ ವ್ಯವಸಾಯ ಮಾಡಲು ಹೋದ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು ಒಂದರಿಂದ ಎರಡು ಗಂಟೆಯ ಒಳಗೆ ಮನೆಗೆ ನುಗ್ಗಿ ಎರಡು ಲಕ್ಷ ನಗದು ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ತೋಟದಲ್ಲಿ ಕೆಲಸ ಮುಗಿಸಿಕೊಂಡು ಬಂದ ಕೃಷ್ಣಾರೆಡ್ಡಿ ಕುಟುಂಬದವರು ಕಳ್ಳತನ ವಾಗಿರುವುದು ದೃಢಪಟ್ಟಿದೆ.

ಘಟನೆಯ ವಿಷಯ ತಿಳಿದ ತಕ್ಷಣ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಕುಮಾರ್, ಬೆರಳಚ್ಚು ತಜ್ಞರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Chickballapur News: ಎನ್.ನರಸಿಂಹಮೂರ್ತಿಗೆ ಗುರುಶ್ರೇಷ್ಠ ಪ್ರಶಸ್ತಿ ಗರಿ

Leave a Reply

Your email address will not be published. Required fields are marked *