Monday, 12th May 2025

ಪ್ರಿಯಾಂಕಾ ಸ್ಪರ್ಧೆಗೆ ಸರ್ವೆ ಬಗ್ಗೆ ಮಾಹಿತಿ ಇಲ್ಲ: ತಂಗಡಗಿ

ಕಾರಟಗಿ: ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ, ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸಮೀಕ್ಷೆ ಮಾಡಿದ್ದು ನಮಗೆ ಮಾಹಿತಿ ಇಲ್ಲ. ಕಾಂಗ್ರೆಸ್ ‌ಇಡೀ ದೇಶಾದ್ಯಂತ ಸರ್ವೆ ಮಾಡುತ್ತಿದೆ. ಕೆಲವು ಸರ್ವೆ ನಮಗೂ ಗೊತ್ತಾಗುವುದಿಲ್ಲ. ಒಂದೊಮ್ಮೆ ಪ್ರಿಯಾಂಕಾ ಗಾಂಧಿ ಬಂದರೆ 1 ಲಕ್ಷಕ್ಕೂ ಹೆಚ್ಚು ಲೀಡ್ ನಿಂದ ಗೆಲ್ಲಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಇಡೀ ದೇಶಕ್ಕೆ ಕೊಪ್ಪಳ ಪರಿಚಯ ಆಗಲಿದೆ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಅನುಕೂಲವಾಗಲಿದೆ. ಕೊಪ್ಪಳದಲ್ಲಿ ಆಗಿರುವ ಎಲ್ಲ ರೈಲ್ವೇ ಯೋಜನೆಗಳನ್ನು ಕಾಂಗ್ರೆಸ್ ‌ಜಾರಿ ಮಾಡಿದೆ. ಬಸವರಾಜ ರಾಯರೆಡ್ಡಿ, ಎಚ್.ಜಿ.ರಾಮುಲು ನಂತರ ಯಾರೂ ಕೊಪ್ಪಳಕ್ಕೆ ಕೇಂದ್ರದ ಯೋಜನೆ ತಂದಿಲ್ಲ. ಕಳೆದ ಎರಡು ಬಾರಿ‌ ಜನರ ಮನಸ್ಸು ಕೆಡಿಸಿ ಬಿಜೆಪಿಗರು ಗೆದ್ದಿದ್ದಾರೆ. ಕೊಪ್ಪಳ ಜನರು ಮೂರನೇ ಬಾರಿ ಮೋಸ ಹೋಗುವುದಿಲ್ಲ. ಕೊಪ್ಪಳ ಜನರು ಪದೇ ಪದೇ ಅದೇ ತಪ್ಪು ಮಾಡುವುದಿಲ್ಲ. ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *