Monday, 12th May 2025

ರಾಮಚಂದ್ರ ಸ್ವಾಮಿ ಸಂಗಡಿಗರಿಂದ ಭಜನೆ ಹಾಗೂ ಪಡಿ ಪೂಜೆ

ಗುಬ್ಬಿ: ತಾಲೋಕಿನ ಚೇಳೂರು ಹೋಬಳಿಯ ಮಾದಾಪುರ ಮಜರೆ ಓಬಳಾಪುರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಅನಂತಸ್ವಾಮಿಯವರ ನೇತೃತ್ವದಲ್ಲಿ ರಾಮ ಚಂದ್ರ ಸ್ವಾಮಿ ಸಂಗಡಿಗರಿಂದ ಭಜನೆ ಹಾಗೂ ಪಡಿ ಪೂಜೆ ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇನೆ ತಾಲೂಕ್ ಅಧ್ಯಕ್ಷ ಹಾಗೂ ಗ್ರಾ ಪಂ ಸದಸ್ಯ ಶಿವಣ್ಣ ಎಂ ಡಿ ಗುರುಸ್ವಾಮಿಗಳಾದ ರಂಗ ಸ್ವಾಮಿ, ರಘು ಸ್ವಾಮಿ, ಹಾಗೂ ಗ್ರಾಮಸ್ಥರು ಹಾಜರಿದ್ದರು.