Saturday, 10th May 2025

Shahapur Breaking: ನಕಲಿ ರಸಗೊಬ್ಬರ, ಕ್ರಿಮಿನಾಶಕ ಔಷಧಿ ಜಪ್ತಿ

ಶಹಾಪುರ (ಯಾದಗಿರಿ) : ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ನಕಲಿ ರಸಗೊಬ್ಬರ ಹಾಗೂ ಮಿನಾಶಕ ಔಷಧಿಯನ್ನು ಸೋಮವಾರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ 50 ಚೀಲ ರಸಗೊಬ್ಬರ ಅದರ ಮೌಲ್ಯ $70 ಸಾವಿರ ಹಾಗೂ 44 ಡಬ್ಬಾ ರಸಗೊಬ್ಬರ ಅದರ ಮೌಲ್ಯ $1.56ಲಕ್ಷ ಹೀಗೆ ಒಟ್ಟು $2.26 ಲಕ್ಷ ಅಂದಾಜು ಮೌಲ್ಯದ ವಸ್ತು ಇದಾಗಿದೆ. ಅಲ್ಲದೆ ಲಾರಿ ಮತ್ತು ಚಾಲಕ ವಿಜಯಪುರದ ಸಯ್ಯದ ಅಮೀನಸಾಬ್ ಉಕ್ಕಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಸಾಗಣೆ ಮಾಡಲು ಸೂಚಿಸಿದ್ದ ವಿಜಯಪುರದ ಭರತೇಶ ಚಾಂದಕೋಟಿ ಅವರ ಮೇಲೆ ದೂರು ದಾಖಲಾಗಿದೆ.

ಸಿಂದಗಿ ಮತ್ತು ಚಾಮನಾಳ ರಸ್ತೆಯ ತಾಲ್ಲೂಕಿನ ನಡಿಹಾಳ ಗ್ರಾಮದ ಬಳಿ ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದಾಗ ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿದಾಗ ಲಾರಿ ಚಾಲಕನು ತಿಳಿಸಿದ್ದೇನೆಂದರೆ, ಭರತೇಶ ಅವರು ವಿಜಯಪುರದ ಶೆಡ್ ಅಂಗಡಿಯಲ್ಲಿ ಲೋಡ ಮಾಡಿದ ರಸಗೊಬ್ಬರ ಮತ್ತು ಕ್ರೀಮಿನಾಶಕ ಔಷಧಿಯನ್ನು ಶಹಾಪುರ ತಾಲ್ಲೂಕಿನ ಚಾಮನಾಳ ಗ್ರಾಮಕ್ಕೆ ತಲುಪಿಸುವಂತೆ ಸೂಚಿಸಿದ್ದರಿಂದ ತೆಗೆದುಕೊಂಡು ಹೋಗುತ್ತಿರುವಾದ ತಿಳಿಸಿದರು. ಖಚಿತ ಬಾತ್ಮಿ ಮೇಲೆ ದಾಳಿ ಮಾಡಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಗೋಗಿ ರೈತ ಸಂಪರ್ಕ ಅಧಿಕಾರಿ ಪರಶುರಾಮ ದೂರು ನೀಡಿದ್ದಾರೆ.

ಗೋಗಿ ಠಾಣೆಯ ಪಿ.ಎಸ್.ಐ ದೇವೇಂದ್ರರಡ್ಡಿ ದೂರು ದಾಖಲಿಸಿಕೊಂಡಿದ್ದಾರೆ.