Wednesday, 14th May 2025

ಜು.29ರಿಂದ ಪೀಣ್ಯ ಎಲಿವೇಟೆಡ್ ಪ್ಲೈ ಓವರ್ ಸಂಚಾರಕ್ಕೆ ಮುಕ್ತ…ಒಂದು ದಿನ ಹೊರತುಪಡಿಸಿ..!

ಬೆಂಗಳೂರು: ನಗರದಲ್ಲಿನ ಪೀಣ್ಯ ಎಲಿವೇಟೆಡ್ ಪ್ಲೈ ಓವರ್ ನ ಮೂಲಕ ಗೋರಗುಂಟೆ ಪಾಳ್ಯಕ್ಕೆ, ಗೋರಗುಂಟೆ ಪಾಳ್ಯದಿಂದ ಪ್ಯಾರ್ಲೇಜಿ ಫ್ಯಾಕ್ಟರಿ ವರೆಗೆ ಭಾರೀ ವಾಹನಗಳ ಸಂಚಾರವನ್ನು ಜು.29ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6ರವರೆಗೆ ಒಂದು ದಿನ ಹೊರತುಪಡಿಸಿ, ಎಲ್ಲಾ ದಿನಗಳು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ಪೀಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಮೇಲೇತುವೆ( ರಾಷ್ಟ್ರೀಯ ಹೆದ್ದಾರಿ-4 ಪೀಣ್ಯ ಎಲಿವೇಟೆಡ್ ಫೈಓವರ್ ) ಮೇಲೆ ಕೆನ್ಸಮೆಟಲ್ ಮೀಡಿಯಾ ಅಪ್ಪ‌ ರ್ಯಾಂಪ್ ನಿಂದ ಎಸ್.ಆರ್.ಎಸ್. ಡೌನ್ ರ್ಯಾಂಪ್ ವರೆಗೆ ರಸ್ತೆ ಎರಡೂ ಬದಿಗಳಲ್ಲಿ ಭಾರೀ ವಾಹನಗಳನ್ನು ಸಂಚಾರವನ್ನು ನಿಷೇಧಿಸಿ, ಫೆ.16, 2022 ರಿಂದ ಮೇಲ್ವೇತುವೆಯ ಎರಡೂ ಕಡೆಗಳಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು, ಇನ್ನುಳಿದ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ರಾತ್ರಿ 12:00 ರಿಂದ ಬೆಳಗ್ಗೆ 05:00 ಗಂಟೆಯವರೆಗೆ ನಿಷೇಧಿಸಿ ಉಲ್ಲೇಖ-1 ರೀತ್ಯಾ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಎಂದಿದೆ.

ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದಿನಾಂಕ: 29.07.2024 ರಿಂದ ಪ್ರತಿ ಶುಕ್ರವಾರ ಮಾತ್ರ ಬೆಳಿಗ್ಗೆ 06:00 AM ರಿಂದ ಶನಿವಾರ ಬೆಳಿಗ್ಗೆ 06:00 AM ವರೆಗೆ ಗೌಟಿಂಗ್ ಕಾಮಗಾರಿಯ ಸಲುವಾಗಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಉಳಿದ ಎಲ್ಲಾ ದಿನಗಳಂದು ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದೆಂದು ದಿನಾಂಕ: 23.07.2024 ರಂದು ಉಲ್ಲೇಖ-2 ರೀತ್ಯಾ ಮನವೆ ಪತ್ರವನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದೆ.

ಸಂಚಾರ ಮಾರ್ಪಾಡು :

• ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲೇತುವೆ ರಾಷ್ಟ್ರೀಯ ಹೆದ್ದಾರಿ-4 ಪೀಣ್ಯ ಎಲಿವೇಟೆಡ್ ಫೈಓವರ್ ) ಮೇಲೆ ಕೆನ್ಸಮೆಟಲ್ ಮೀಡಿಯಾ ಅಪ್ಪ‌ ರ್ಯಾಂಪ್ ನಿಂದ ಎಸ್.ಆರ್.ಎಸ್. ಡೌನ್ ರ್ಯಾಂಪ್ ವರೆಗೆ ರಸ್ತೆ ಎರಡೂ ಬದಿಗಳಲ್ಲಿ ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಸಂಚರಿಸುವ ನಿಬಂಧನೆ ಯೊಂದಿಗೆ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

• ಗೌಟಿಂಗ್ ಕಾಮಗಾರಿಯ ಸಲುವಾಗಿ ದಿನಾಂಕ: 29.07.2024 ರಿಂದ ಮುಂದಿನ ಆದೇಶದವರೆವಿಗೂ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಪ್ರತಿ ಶನಿವಾರ ಬೆಳಗ್ಗೆ 06ಗಂಟೆಯವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *