Sunday, 11th May 2025

Pavagada News: ಪಾವಗಡ ಪಟ್ಟಣದಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಅದ್ದೂರಿ ಯಾಗಿ ಆಚರಿಸಿದ ಮುಸ್ಲಿಂ ಬಾಂಧವರು

ಇಮ್ರಾನ್ ಉಲ್ಲಾ, ಪಾವಗಡ

ಪಾವಗಡ ಪಟ್ಟಣದ ಮೂಲ ಮೂಲೆಗಳಿಂದ ಆಗಮಿಸಿದ ಮುಸ್ಲಿಂ ಬಾಂಧವರಿಂದ ವಿವಿಧ ಸ್ತಂಭ ಚಿತ್ರಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮೊಹಮ್ಮದ ಪೈಗಂಬರ್ ಹೆಸರಲ್ಲಿ ಘೋಷಣೆ ಕೂಗುತ್ತಾ ಸಾವಿರಾರು ಜನ ಜಾತದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.           

ಸೂಫಿ ಅಥವಾ ಬರೇಲ್ವಿ ಪಂಥದ ಮುಸ್ಲಿಮರು ಈದ್ ಮಿಲಾದ್-ಉನ್-ನಬಿ ಅಥವಾ ಈದ್-ಎ-ಮಿಲಾದ್  ಎಂದು ಆಚರಿಸುತ್ತಾರೆ, ಇದನ್ನು ಆಡುಮಾತಿನಲ್ಲಿ ನಬಿದ್ ಮತ್ತು ಮೌಲಿದ್ ಎಂದೂ ಕರೆಯುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ ನಲ್ಲಿ ಮೂರನೇ ತಿಂಗಳಾದ ರಬಿ ಅಲ್-ಅವ್ವಾಲ್ ಸಮಯದಲ್ಲಿ ಸೂಫಿ ಮತ್ತು ಬರೇಲ್ವಿ ಪಂಥದವರು ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಾರೆ.

ಸೂಫಿ ಮತ್ತು ಬರೇಲ್ವಿ ಚಿಂತನೆಯ ಶಾಲೆಗಳಿಗೆ ಸೇರಿದ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್ ಮಿಲಾದ್-ಉನ್-ನಬಿ ಎಂದು ಆಚರಿಸುತ್ತಾರೆ, ಇದನ್ನು ಈದ್-ಎ-ಮಿಲಾದ್, ನಬಿದ್ ಮತ್ತು ಆಡುಮಾತಿ ನಲ್ಲಿ ಅರೇಬಿಕ್‌ನಲ್ಲಿ ಮೌಲಿದ್ ಎಂದೂ ಕರೆಯುತ್ತಾರೆ. 

ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬಿ ಅಲ್-ಅವ್ವಾಲ್ ಸಮಯದಲ್ಲಿ ಹಬ್ಬವನ್ನು ಆಚರಿಸಲಾಗು ತ್ತದೆ. 

ದೇಶದಾದ್ಯಂತ ಈದ್ ಮಿಲಾದ್ ಹೆಸರಿನಲ್ಲಿ ಆಚರಿಸುತ್ತಾರೆ. ಮಕ್ಕ ಮದೀನಾ ರೀತಿ ಮಾದರಿಯಲ್ಲಿ ವಾಹನಗಳಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆಚರಿಸಿದ್ದು ವಿಶೇಷವಾಗಿತ್ತು. ಪ್ರಮುಖ ರಸ್ತೆಯಲ್ಲಿ ಓಡಾಡೋ ಅನ್ಯ ಸಮುದಾಯದ ಸಹೋದರರಿಗೆ ಸಿಹಿ ಹಂಚುವ ಮೂಲಕ ಪೈಗಂಬರ್ ಅವರ ಹುಟ್ಟುಹಬ್ಬ ಆಚರಿಸಿದ್ದು ವಿಶೇಷ ವಾಗಿತ್ತು.

ಪಟ್ಟಣದ ವಿವಿಧ ಮಸೀದಿಗಳ ಮುತುವಲ್ಲಿಗಳು. ಪೇಶು ಮಾಮಗಳು. ಮುಖಂಡರು  ಮಕ್ಕಳು  ಹೊಸ ಹೊಸ ಉಡುಪುಗಳ ಧರಿಸಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: Eid Milad Celebration: ಸಂಭ್ರಮದ ಈದ್ ಮಿಲಾದ್ ಆಚರಣೆ 

Leave a Reply

Your email address will not be published. Required fields are marked *