Friday, 23rd May 2025

ಕಂದನ ಶವಸಾಗಿಸಲು ಹಣವಿಲ್ಲದೆ ಪರದಾಟ

ಬಿಜೆಪಿ ಮುಖಂಡ ನೆರವು
ಕೂಲಿ ಮಾಡುವ ದಂಪತಿಗಳು
ತುಮಕೂರು: ಕೂಲಿ ಮಾಡುವ ದಂಪತಿಗಳು  ಮೃತನ ಕಂದಮ್ಮನ ಶವಸಾಗಿಸಲು ಹಣವಿಲ್ಲದೆ ಪರದಾಡುತ್ತಿದ್ದಾಗ ಬಿಜೆಪಿ ಮುಖಂಡನ ನೆರವಿನಿಂದ ಸ್ವಗ್ರಾಮ ತಲುಪಿದ್ದಾರೆ.
ದಾವಣಗೆರೆ ಜಿಲ್ಲೆ ಗೋಪನಾಳ್ ಗ್ರಾಮದ ಮಂಜುನಾಥ್ ಮತ್ತು ಗೌರಮ್ಮ ದಂಪತಿ  ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿ ದ್ದರು. ನಾಲ್ಕು ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಗೌರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಸೋಮವಾರ ಮುಂಜಾನೆ 4 ಗಂಟೆ ಯಲ್ಲಿ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿದೆ. ಮಗುವಿನ ಶವ ತೆಗೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ.
40 ಕಿಲೋ ಮೀಟರ್ ವ್ಯಾಪ್ತಿಗೆ ಮಾತ್ರವೇ ಸರಕಾರಿ ಆಂಬುಲೆನ್ಸ್ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಖಾಸಗಿ ಆಂಬು ಲೆನ್ಸ್‌ನಲ್ಲಿ  ಹೋಗಲು ಹಣವಿಲ್ಲದೆ ಮೃತ ಕಂದನ ಶವವನ್ನು ನಗರದ ಸರಕಾರಿ ಸಾರಿಗೆ ಬಸ್ ನಿಲ್ದಾಣಕ್ಕೆ ತಂದು ಸ್ವಗ್ರಾಮಕ್ಕೆ ಬಸ್ಸಿನಲ್ಲಿ  ತೆಗೆದುಕೊಂಡು ಹೋಗಲು ಬಸ್ ಚಾಜ್೯ಗೂ ಹಣವಿಲ್ಲದೆ ಕಣ್ಣೀರಿಡುತ್ತಿದ್ದರು. ಕೂಲಿ ಕಾರ್ಮಿಕ ಮಂಜುನಾಥ್ ಅವರ ತಾಯಿಯೂ ಜತೆಯಲ್ಲಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ  ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹನುಮಂತರಾಜು, ಮಗುವಿನ ಕುಟುಂಬಸ್ಥರಿಗೆ ಊರಿಗೆ ಹೋಗಲು ಕಾರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.