Monday, 12th May 2025

ಪ್ರಿಯಾಂಕ ಖರ್ಗೆ ವಿವಾದಾತ್ಮಕ ಹೇಳಿಕೆಗೆ ಖಂಡನೆ: ಪ್ರತಿಭಟನೆ

ವಿಜಯಪುರ : ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯೆಕ್ಷೆ ಶಿಲ್ಪಾ ಕುದರಗುಂಡ ಪ್ರಿಯಾಂಕ ಖರ್ಗೆ ಅವರಿಗೂ ಅಕ್ಕ – ತಂಗಿಯರಿದ್ದಾರೆ, ನಾಳೆ ಯಾರಾದರೂ ವಿದ್ಯಾರ್ಥಿನಿಯರು ನೌಕರಿ ಹಿಡಿದರೆ, ಅವರನ್ನು ಸಂಶಯದ ದೃಷ್ಟಿಯಿಂದ ನೋಡುವ ಪರಸ್ಥಿತಿ ಬರುತ್ತದೆ. ಮುಂದೆ ಅವರನ್ನು ಯಾರು ಮದುವೆಯಾಗ್ತಾರೆ. ಕೂಡಲೇ ಪ್ರಿಯಾಂಕ ಖರ್ಗೆಯವರು ಕ್ಷಮೆ ಕೇಳಬೇಕು. ಸರಕಾರ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇವೇಳೆ ಶಾಸಕ ಪ್ರಿಯಾಂಕ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸೇರಿದಂತೆ ಹಲವು ಮಹಿಳಾ ಮುಖಂಡರು ಹಾಜರಿದ್ದರು.