ಒಂದು ವಾರದೊಳಗೆ ಅಂಬೇಡ್ಕರ್ ಪ್ರತಿಮೆಗೆ ಸುಟ್ಟಿರುವ ಕೊಳಕು ಬಟ್ಟೆಯನ್ನು ತೆರವುಗೊಳಿಸದಿದ್ದರೆ ಮತ್ತೆ ಹೋರಾಟದ ಎಚ್ಚರಿಕೆ
ಚಿಂತಾಮಣಿ : ನಗರದ ಅಂಬೇಡ್ಕರ್ ಭವನದ ಮುಂಭಾಗವಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ರಾತೋರಾತ್ರಿ ಆನೇಕಲ್ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ಕೆಲ ಪದಾಧಿಕಾರಿಗಳು ಅಂಬೇಡ್ಕರ್ ಪ್ರತಿಮೆ ಯನ್ನು ಇಟ್ಟು ಹೋಗಿದ್ದು ಇತ್ತೀಚೆಗೆ ಭಾರೀ ಸದ್ದು ಮಾಡಿದ್ದು ಹಿರಿಯ ದಲಿತ ಮುಖಂಡರ ಸಂಧಾನದ ಫಲವಾಗಿ ಧರಣಿ ವಾಪಸ್ಸು ಪಡೆಯಲಾಯಿತು.
ದಲಿತ ಹಿರಿಯ ಮುಖಂಡರಾದ ಗಡ್ಡಂ ವೆಂಕಟೇಶ್,ಮುನಿಸ್ವಾಮಿ,ಗೊಲಹಳ್ಳಿ ಶಿವಪ್ರಸಾದ್,ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಧರಣಿಯಲ್ಲಿ ನಿರತ ದಲಿತ ಸಂಘಟನೆಗಳ ಪದಾಧಿಕಾರಿಗಳ ನಡುವೆ ಚರ್ಚೆ ನಡೆಸಿ ಎಂಟು ದಿನಗಳ ಒಳಗಡೆ ಅಂಬೇಡ್ಕರ್ ಪ್ರತಿಮೆಗೆ ಕಟ್ಟಿರುವ ಕೊಳಕು ಬಟ್ಟೆಯನ್ನು ತೆರವು ಗೊಳಿಸದಿದ್ದರೆ ದಲಿತ ಹಿರಿಯ ಮುಖಂಡರು ಸಹ ಸಾತ್ ನೀಡಿ ಮುಂದಿನ ಹೋರಾಟಗಳನ್ನು ಮಾಡೋಣ ಎಂಬ ಭರವಸೆ ನೀಡಿದಾಗ ಧರಣಿಯನ್ನು ಹಿಂಪಡೆಯಲಾಯಿತು.
ದಲಿತ ಮುಖಂಡರಾದ ಗಡ್ಡಂ ವೆಂಕಟೇಶ್,ವಿಜಯನರಸಿAಹ ಮಾತನಾಡಿ ಎಂಟು ದಿನಗಳ ಒಳಗಡೆ ಎಲ್ಲಾ ದಲಿತ ಪರ ಸಂಘಟನೆಗಳ ಮುಖಂಡರುಗಳು ಸೇರಿ ಕೊಳಕು ಬಟ್ಟೆ ತೆರೆವುಗೊಳಿಸದಿದ್ದರೆ ಹೋರಾಟಗಳನ್ನು ನಡೆಸೋಣ ಎಂದು ಹೇಳಿದರು.
ಧರಣಿಯಲ್ಲಿ ಕವ್ವಾಲಿ ವೆಂಕಟರವಣಪ್ಪ, ಎಂ.ವಿ. ರಾಮಪ್ಪ, ಜನಾರ್ಧನ್ ಬಾಬು, ಜನಾರ್ಧನ್, ವಕೀಲ ಗೋಪಿ, ಜನಾ, ನವೀನ್ ಕೃಷ್ಣ, ಆನಂದ್, ರಾಜೇಂದ್ರ ಬಾಬು, ಮಣಿಕಂಠ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: #FarmersDharna