Saturday, 10th May 2025

ಬಿಜೆಪಿ ಅಭ್ಯರ್ಥಿ, ಶಾಸಕ ಎನ್‌.ಮಹೇಶ್’ರಿಂದ ಮತ ಚಲಾವಣೆ

ಚಾಮರಾಜನಗರ: ರಾಜ್ಯ ವಿಧಾನಸಭೆ ಚುನವಾಣೆಯ ಮತದಾನ ಆರಂಭವಾಗಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇ ಗಾಲದ ಐಎಸ್‌ಸಿ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎನ್‌.ಮಹೇಶ್ ಮತ ಚಲಾವಣೆ ಮಾಡಿದ್ದಾರೆ.

ಕೊಳ್ಳೇಗಾಲದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮತಗಟ್ಟೆ ಸಂಖ್ಯೆ 121ರಲ್ಲಿ ಎನ್‌.ಮಹೇಶ್ ಮತದಾನ ಮಾಡಿ ದರು. ಈ ವೇಳೆ ಶಾಸಕ ಎನ್‌.ಮಹೇಶ್‌ ಅವರಿಗೆ ಪುತ್ರ ಅರ್ಜುನ್ ಸಾಥ್ ನೀಡಿದರು.

ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ವೃದ್ಧರು, ಯುವ ಮತದಾರರು ಮತದಾನ ಮಾಡಲು ನವೋಲ್ಲಾಸದಿಂದ ದಾಂಗುಡಿ ಇಡು ತ್ತಿದ್ದಾರೆ. ಚಾಮರಾಜನಗರದ 74 ವರ್ಷದ ಮಧುಸೂಧನ್‌ ಎನ್ನುವ ಹೆಸರಿನ ವೃದ್ಧ ರೊಬ್ಬರು ನಡೆಯಲಾಗದೇ ವೀಲ್ ಚೇರ್‌ನಲ್ಲಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.

ಚಾಮರಾಜನಗರದ ಹರ್ಷಿತಾ ಎಂಬ ಹೊಸ ವೋಟರ್, ಮತದಾನ ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.