Saturday, 10th May 2025

NGO: “ನಮ್ಮ ಬೆಂಗಳೂರು ಚಾಲೆಂಜ್‌”ನಲ್ಲಿ ವಿಜೇತರಾದ ಐದು ಎನ್‌ಜಿಒಗಳಿಗೆ ತಲಾ 10 ಲಕ್ಷ ರೂ. ಅನುದಾನ ವಿತರಣೆ

ಮಹಿಳಾ ಸಬಲೀಕರಣ, ತ್ಯಾಜ್ಯ ನಿರ್ವಹಣೆ, ಆಟೋ ದರದಲ್ಲಿ ಪಾರದರ್ಶಕತೆ ಹಾಗೂ ಕುಡಿಯು ನೀರು ಪೂರೈಕೆ ವಿಷಯಗಳ ಮೇಲೆ ವಿನೂತನ ಐಡಿಯಾ ಹಂಚಿಕೊಂಡ ಎನ್‌ಜಿಒಗಳು

ಬೆಂಗಳೂರು: “ಬೆಂಗಳೂರು ಹಬ್ಬ”ದ ಭಾಗವಾಗಿ ಬೆಂಗಳೂರಿನ ಸಮಸ್ಯೆಗೆ ಪರಿಹಾರ ಸೂಚಿಸುವ “ನಮ್ಮ ಬೆಂಗಳೂರು ಚಾಲೆಂಜ್‌ನ” ಸ್ಪರ್ಧೆಯಲ್ಲಿ ವಿಜೇತರಾದ ಐದು ಎನ್‌ಜಿಒಗಳಿಗೆ ತಲಾ 10 ಲಕ್ಷ ರೂ. ಅನುದಾನವನ್ನು ವಿತರಿಸಲಾಯಿತು.

ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಹಾಗೂ ಡಬ್ಲ್ಯೂಟಿ ಫಂಡ್‌ ಸಹಯೋಗದಲ್ಲಿ ನವೆಂಬರ್‌ನಲ್ಲಿ ಬೆಂಗಳೂರಿನ ಸಮಸ್ಯೆಗೆ ವಿನೂತನ ಪರುಹಾರ ಸೂಚಿಸುವ ಅರ್ಹರಿಂದ “ನಮ್ಮ ಬೆಂಗಳೂರು ಚಾಲೆಂಜ್‌” ಉಪಕ್ರಮದ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಉಪಕ್ರಮದಲ್ಲಿ ಆಯ್ಕೆಯಾದ ಐದು ಎನ್‌ಜಿಒಗಳಿಗೆ ತಲಾ 10 ಲಕ್ಷ ರೂ. ಅನುದಾನವನ್ನು ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ವಿಜೇತರ ವಿವರಗಳು:

  • ಸಸ್ಟೈನಬಲ್ ವಾಟರ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್: ಇವರು ನಗರದಲ್ಲಿ ಶುದ್ಧ ಕುಡಿಯುವ ನೀರಿಗೆ ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ, ಪ್ರಸ್ತುತ ಬೆಂಗಳೂರಿನ ಜಲಮೂಲಗಳು ಸಂಸ್ಕರಿಸದ ಒಳಚರಂಡಿ ನೀರು, ಕೈಗಾರಿಕಾ ತ್ಯಾಜ್ಯ ಮತ್ತು ಅತಿಕ್ರಮಣಗಳಿಂದ ತೀವ್ರ ಮಾಲಿನ್ಯ ಎದುರಿಸುತ್ತಿದೆ. ಇದು ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ನೈಸರ್ಗಿಕವಾಗಿಯೇ ನೀರಿನ ಪುನರುಜ್ಜೀವನ ಗೊಳಿಸುವ ನಿಟ್ಟಿನಲ್ಲಿ ನವೀನ ಆಲೋಚನೆಯನ್ನು ನೀಡಿದ್ದಾರೆ. ಹೀಗಾಗಿ ಇವರನ್ನು ಆಯ್ಕೆ ಮಾಡಲಾಗಿದೆ.

*ಮಹಿಳಾ ಶಕ್ತಿ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್ ತರಬೇತಿ ಕಾರ್ಯಕ್ರಮ (ನಮ್ಮ ಫೌಂಡೇಶನ್): ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರದಲ್ಲೂ ಉದ್ಯೋಗದಲ್ಲಿದ್ದಾರೆ, ಅವರಿಗೆ ಇನ್ನಷ್ಟು ಸ್ವಾವಲಂಬನೆ ಜೀವನದ ನೀಡಲು “ನಮ್ಮ ಯಾತ್ರಿ” ಅಪ್ಲಿಕೇಷನ್‌ ಮೂಲಕ ಮಹಿಳಾ ಶಕ್ತಿ ಎಲೆಕ್ಟ್ರಿಕ್ ಆಟೋ ಕಾರ್ಯಕ್ರಮ’ದ ಅಡಿಯಲ್ಲಿ ವಿದ್ಯುತ್ ವಾಹನಗಳನ್ನು ಚಾಲನೆ ಮಾಡುವ ಅವಕಾಶಗಳನ್ನು ಒದಗಿಸಲು ಅವಕಾಶ ನೀಡುವ ಬಗ್ಗೆ ಆಲೋಚನೆ ಹಂಚಿಕೊಂಡಿದ್ದಾರೆ.

ನಾಗರಮೀಟರ್‌ ಆಟೋ (BrandPride Mobility Pvt Ltd) – ನಾಗರಾ ಮೀಟರ್ ಆಟೋ ಎಂಬುದು ಬೆಂಗಳೂರು ಮೂಲದ ಸಾಮಾಜಿಕ ಉದ್ಯಮಶೀಲತಾ ಉಪಕ್ರಮವಾಗಿದ್ದು, ಇದು ಪಾರದರ್ಶಕ, ಸರ್ಕಾರದಿಂದ ಅನುಮೋದಿತ ಮೀಟರ್ ದರದ ಆಟೋರಿಕ್ಷಾ ಸೇವೆಗಳನ್ನು ಒದಗಿಸಲಿದೆ. ಅತಿ ಹೆಚ್ಚು ಹಣ ತೆತ್ತು ಆಟೋ ಸಂಚಾರ ಪಡೆಯುವು ದಕ್ಕಿಂತ ಕಡಿಮೆ ದರದಲ್ಲಿ ಹಾಗೂ ಪ್ರಾಮಾಣಿಕ ಸಾರಿಗೆ ಆಯ್ಕೆ ನೀಡುವುದು ಇದರ ಉದ್ದೇಶ

ಅನಾಹತ್ ಫೌಂಡೇಶನ್ – ನಗರ ಪ್ರದೇಶದ ಬಡವರಿಗೆ ಪ್ರಾಥಮಿಕ ಆರೋಗ್ಯ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು ಇವರ ಯೋಜನೆ. ಎಲ್ಲರಿಗೂ ಸಮಾನ ಪ್ರಾಥಮಿಕ ಆರೋಗ್ಯ ಒದಗಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಇವರ ಆಲೋಚನಯನ್ನು ಮಂಡಿಸಿದ್ದಾರೆ.

Lets Be the Change ಎನ್‌ಜಿಒ– ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ತಲೆನೋವು. ಮನೆಯಲ್ಲಿಯೇ ನಿರ್ಮಾಣವಾಗುವ ಶೇ. 1 ರಷ್ಟು ತ್ಯಾಜ್ಯವನ್ನು ಭೂಮಿಯಲ್ಲಿಯೇ ಕರಗಿಸುವ ಸಂಬಂಧ ನಾಗರಿಕರೇ ಜವಾಬ್ದಾರ ನ್ನಾಗಿ ಮಾಡುವ ಹಾಗೂ ಅವರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು ತ್ಯಾಜ್ಯ ಸಮಸ್ಯೆಗೆ ದೊಡ್ಡ ಪರಿಹಾರ ವಾಗಲಿದೆ.

ಈ ಕುರಿತು ಮಾತನಾಡಿದ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಬೆಂಗಳೂರು ಹಬ್ಬದ ಭಾಗವಾಗಿ ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಮ್ಮ ಬೆಂಗಳೂರು ಚಾಲೆಂಜ್‌ನನ್ನು ಘೊಷಿಸಲಾಗಿತ್ತು. ಇದರಡಿ ಒಟ್ಟು 600 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಇದರಲ್ಲಿ 8 ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಈ ಪೈಕಿ ಐವರನ್ನು ಆಯ್ಕೆ ಮಾಡಲಾಗಿದೆ. ಈ ಐದು ವಿಜೇತರು ತಾವು ನೀಡಿದ ಐಡಿಯಾಗಳನ್ನು ಅನುಷ್ಠಾನ ಮಾಡಲು ತಲಾ 10 ಲಕ್ಷ ರೂ.ಗಳ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.

ಉದ್ಯಮಿ ನಿಖಿಲ್ ಕಾಮತ್ ಮಾತನಾಡಿ, ಬೆಂಗಳೂರು ನಮಗೆ ಸಾಕಷ್ಟು ನೀಡಿದ್ದು, ಅದರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಚಾಲೆಂಜ್‌ನನ್ನು ಘೊಷಿಸಿದ್ದೆವು. ಅಂತೆಯೇ ಒಂದು ಐದು ವಿಭಿನ್ನ ಆಲೋಚನೆಗಳು ಮೆಚ್ಚುಗೆಯಾಗಿದ್ದು, ಇದರ ಅನುಷ್ಠಾನದ ಬಗ್ಗೆ ಕುತೂಹಲವಿದೆ ಎಂದು ಹೇಳಿದರು.