ಚಿಕ್ಕಬಳ್ಳಾಪುರ : ಆಚಾರ್ಯ ಪಾಠಶಾಲಾ (ಎ.ಪಿ.ಎಸ್) ಕಲಾ ಮತ್ತು ವಿಜ್ಞಾನ ಕಾಲೇಜು, ಎನ್.ಆರ್.ಕಾಲೋನಿ, ಬೆಂಗಳೂರು, ದಿ ಅಕಾಡೆಮಿ ಟ್ರಸ್ಟ್ (ಟ್ಯಾಕ್ಟ್), ಬೆಂಗಳೂರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ದಿನಾಂಕ : 24.12.2024ರಂದು ಎ.ಪಿ.ಎಸ್ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ “ ರಾಷ್ಟ್ರೀಯ ಗಣಿತ ದಿನಾಚರಣೆ’’ಯನ್ನು ಪ್ರತಿ ವರ್ಷದಂತೆ ಈ ವರ್ಷವೂ ವಿನೂತನ ವಾಗಿ ಆಯೋಜಿಸಿದೆ.
“ರಾಷ್ಟ್ರೀಯ ಗಣಿತ ದಿನಾಚರಣೆ”ಯು ಭಾರತ ದೇಶದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ ರವರ ಸಾಧನೆ ಯನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವಾದ ಡಿಸೆಂಬರ್ ೨೨ ಅನ್ನು ‘ರಾಷ್ಟ್ರೀಯ ಗಣಿತ ದಿನಾಚರಣೆ’ ಎಂದು ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯೂ ಡಿಸೆಂಬರ್ 24, 2024ರಂದು (ಮಂಗಳವಾರ) ಒಂದು ದಿನದ ಗಣಿತ ಕಾರ್ಯಾಗಾರ ‘ಇನ್ಫಿನಿಟಿ (ಅನಂತ)’ಅನ್ನು ಎ.ಪಿ.ಎಸ್ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸ ಲಾಗುತ್ತಿದೆ. ಪ್ರಸ್ತುತ ಗಣಿತ ಕಾರ್ಯಾಗಾರದಲ್ಲಿ ಬೆಂಗಳೂರಿನ ವಿವಿಧ ಕಾಲೇಜಿನ ಪದವಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಲಿದ್ದಾರೆ.
ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 24.12.2024, ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಎ.ಪಿ.ಎಸ್ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದೆ. ಕಾರ್ಯಾಗಾರವನ್ನು ಖ್ಯಾತ ಗಣಿತ ಸಂವಹನ ಕಾರರಾದ ಶ್ರೀ ಕೃಷ್ಣ ಚೈತನ್ಯರವರು ಉದ್ಘಾಟಿಸಲಿದ್ದು, ತದನಂತರ ಇನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ರಮೇಶ್ ಬಿ.ಕೆ, ಶೈಕ್ಷಣಿಕ ಸಂಯೋಜಕರು, ಜೈನ್ ಕಾಲೇಜು, ಬೆಂಗಳೂರು, ಪ್ರೊ. ಎ.ಪ್ರಕಾಶ್, ಕಾರ್ಯದರ್ಶಿ, ಎ.ಪಿ.ಎಸ್ ಶೈಕ್ಷಣಿಕ ಸಂಸ್ಥೆ, ಬೆಂಗಳೂರು, ಡಾ. ಎಸ್.ರಾಜೀವ್, ಅಧ್ಯಕ್ಷರು, ಕಾರ್ಯಕಾರಿ ಮಂಡಳಿ, ಎ.ಪಿ.ಎಸ್ ಶೈಕ್ಷಣಿಕ ಸಂಸ್ಥೆ, ಬೆಂಗಳೂರು, ಪ್ರೊ. ಬಿ.ಜಯಶ್ರೀ, ಪ್ರಾಂಶುಪಾಲರು, ಎ.ಪಿ.ಎಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಶ್ರೀ ಸುನೀಲ್ ಕುಮಾರ್, ಸಹಾಯಕ ಪ್ರಾಧ್ಯಾಪಕರು ಹಾಗೂ ಗಣಿತ ವಿಭಾಗದ ಮುಖ್ಯಸ್ಥರು, ಎ.ಪಿ.ಎಸ್.ವಿಜ್ಞಾನ ಕಾಲೇಜು ಮತ್ತು ಕು. ಆಶಾ ವೈ.ಎಂ.ಸಹಾಯಕ ಪ್ರಾಧ್ಯಾಪಕರು, ಗಣಿತ ವಿಭಾಗ, ಎ.ಪಿ.ಎಸ್.ವಿಜ್ಞಾನ ಕಾಲೇಜು ಇವರು ಭಾಗವಹಿಸಲಿದ್ದಾರೆ.
ಎ.ಪಿ.ಎಸ್ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಎ.ಎಸ್.ವಿಷ್ಣು ಭರತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಇದನ್ನೂ ಓದಿ: chikkaballapurnews