ತುಮಕೂರು: ಕಾಡುಗೊಲ್ಲ ಬುಡಕಟ್ಟು ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕರ್ನಾಟಕ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನಾಗಣ್ಣ ಒತ್ತಾಯಿಸಿದ್ದಾರೆ.

ಕಾಡುಗೊಲ್ಲ ಜನಾಂಗದವರು ಹೆಚ್ಚಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರು ಹಲವು ಬಾರಿ ಹೇಳಿಕೆ ನೀಡಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ತಮ್ಮ ಪಕ್ಷ ಮತ್ತು ಸರಕಾರ ಬದ್ಧವಾಗಿದೆ ಎನ್ನುವ ಭರವಸೆ ನೀಡಿದ್ದಾರೆ, ಆದರೆ ಇಲ್ಲಿಯವರೆಗೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ, ಜತೆಗೆ ಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲ ನಿಗಮವನ್ನ ಸ್ಥಾಪಿಸಿ ಸಮುದಾಯದ ಕಣ್ಮರೆಸುವ ತಂತ್ರವನ್ನ ಸರ್ಕಾರ ಮಾಡಿದೆ ಆದರೆ ಈವರೆಗೂ ಅನುದಾನ ನೀಡಿಲ್ಲ ಎಂದು ಕಿಡಿಕಾರಿದರು.
ಕಾಡುಗೊಲ್ಲರು ವಾಸಿಸುವ ಲೋಕಸಭಾ ಮತ್ತು ವಿಧಾನ ಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರು ಕಾಡುಗೊಲ್ಲ ಜನಾಂಗ ವನ್ನು ST ಗೆ ಸೇರಿಸುವಂತ ಒಕ್ಕೂಟ ಸರ್ಕಾರದ ಗಮನ ಸೆಳೆಯಬೇಕು, ಕಾಡುಗೊಲ್ಲ ನಿಗಮಕ್ಕೆ ಅನುದಾನ ಒದಗಿಸುವ ಕೆಲಸ ಇಲ್ಲದಿದ್ದರೆ ಕಾಡುಗೊಲ್ಲರು ತಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಡುಗೊಲ್ಲರು ವಾಸಿಸುವ ಲೋಕಸಭಾ ಮತ್ತು ವಿಧಾನ ಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರು ಕಾಡುಗೊಲ್ಲ ಜನಾಂಗ ವನ್ನು ಎಸ್ಟಿಗೆ ಸೇರಿಸುವಂತೆ ಒಕ್ಕೂಟ ಸರಕಾರ ಗಮನ ಸೆಳೆಯಬೇಕು, ಕಾಡುಗೊಲ್ಲ ನಿಗಮಕ್ಕೆ ಅನುದಾನ ಒದಗಿಸುವ ಕೆಲಸ ಇಲ್ಲದಿದ್ದರೆ ಕಾಡುಗೊಲ್ಲರು ತಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ ಎಂ ಟಿ ರಮೇಶ್, ಸಂಚಾಲಕ ಶ್ರೀನಿವಾಸ್, ಚಿತ್ತರಾಜು ಜಂಗಮರಳ್ಳಿ ಉಪಸ್ಥಿತರಿದ್ದರು.