Sunday, 11th May 2025

ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭ

ಮೈಸೂರು: ಅಕ್ಟೋಬರ್ 3ರಿಂದ 12ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಸರ್ಕಾರ ಸಿದ್ಧತೆ ಮಾಡಿ ಕೊಳ್ಳುತ್ತಿದೆ. ಇದೇ ವೇಳೆ, ಪ್ರವಾಸಿಗರಿಗಾಗಿ ಇಂದಿನಿಂದ ಹೊಸ ವ್ಯವಸ್ಥೆ ಜಾರಿಯಾಗಿದೆ.

ಮೈಸೂರು ಅರಮನೆ ವೀಕ್ಷಣೆಗೆ ಇಂದಿನಿಂದ ವಾಟ್ಸಪ್ ನಲ್ಲಿಯೇ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ಅರಮನೆ ನೋಡಲು ಬರುವವರ ಅನುಕೂಲ ಕ್ಕಾಗಿ EDCS ಮೊಬೈಲ್ ಒನ್ ಯೋಜನೆ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ EDCS ಮೊಬೈಲ್ ಒನ್ ಯೋಜನೆ ಮೂಲಕವಾಗಿ ಮೊಬೈಲ್ ವಾಟ್ಸಪ್ ಮೂಲಕ ಮೈಸೂರು ಅರಮನೆ ವೀಕ್ಷಣೆಗೆ ಟಿಕೆಟ್ ಪಡೆದುಕೊಳ್ಳ ಬಹುದು. ವಾಟ್ಸಪ್ ನಲ್ಲಿ 8884160088 ಸಂಖ್ಯೆಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳುಹಿಸುವ ಮೂಲಕ ಟಿಕೆಟ್ ಪಡೆಯಬಹುದು.

ಹೀಗೆ ವಾಟ್ಸಪ್ ನಲ್ಲಿ ಖರೀದಿಸಿದ ಟಿಕೆಟ್ 5 ದಿನಗಳ ವರೆಗೆ ಮಾನ್ಯತೆ ಹೊಂದಿರುತ್ತದೆ. ಇದರಿಂದಾಗಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಗಾಗಿ ಪರದಾಡುವ ಸ್ಥಿತಿ ತಪ್ಪುತ್ತದೆ. ಜೊತೆಗೆ ಸಮಯವೂ ಉಳಿತಾಯವಾಗುತ್ತದೆ.

Leave a Reply

Your email address will not be published. Required fields are marked *