Saturday, 10th May 2025

Murder Case: ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಮೂಕ ವ್ಯಕ್ತಿಯನ್ನು ಹೊಡೆದು ಕೊಂದ ಹೆಂಡತಿ-ಮಕ್ಕಳು!

Murder Case

ಬೀದರ್: ಮತಾಂತರ ವಿರೋಧಿಸಿ ರಾಜ್ಯದಲ್ಲಿ ಹಲವು ಹಿಂದುಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ವಿರೋಧಿಸಿದ ಮೂಕ ವ್ಯಕ್ತಿಯನ್ನು ಹೆಂಡತಿ, ಮಕ್ಕಳು ಸೇರಿ ಕೊಲೆ ಮಾಡಿರುವ ಘಟನೆ (Murder Case) ತಾಲೂಕಿನಲ್ಲಿ ನಡೆದಿದೆ.

ಬೀದರ್ ತಾಲೂಕಿನ ಸಾತೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವರಾಜ ಶೇರಿಕರ್ (52) ಕೊಲೆಯಾದವರು. ಕೊಲೆ ಮಾಡಿದ ಬಳಿಕ ಮೃತ ದೇಹವನ್ನು ಮನೆಯಲ್ಲೇ ಇಟ್ಟುಕೊಂಡು, ಹೆಂಡತಿ-ಮಕ್ಕಳು ಅಡುಗೆ ಮಾಡಿ ತಿಂದಿದ್ದಾರೆ ಎನ್ನಲಾಗಿದೆ.

ಮತಾಂತರಕ್ಕೆ ವಿರೋಧ ಮಾಡಿದ ಬಸವರಾಜ ಶೇರಿಕರ್ ಅವರು ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಬೇಕೆಂದು ಹೇಳಿದ್ದರು. ಅಷ್ಟೇ ಅಲ್ಲದೇ ದಸರಾ ಹಬ್ಬದಲ್ಲಿ ಪೂಜೆ ಯಾಕೆ ಮಾಡಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಬಸವರಾಜ್‌ನನ್ನು ಪತ್ನಿ, ಮಕ್ಕಳು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನಲಾಗಿದೆ.

ಕ್ರೈಸ್ತ ಧರ್ಮ ಪಾಲನೆ

ಎಸ್‌ಟಿ ಸಮುದಾಯದ ಬಸವರಾಜ ಶೇರಿಕರ್ ಅವರ ಪತ್ನಿ ಹಾಗೂ ಮಕ್ಕಳು ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಮಾತು ಬರದೇ ಇದ್ದರೂ ಬಸವರಾಜ್ ಮಾತ್ರ ಮತಾಂತರವನ್ನು ವಿರೋಧಿಸುತ್ತಲೇ ಇದ್ದರು. ಇದಕ್ಕಾಗಿ ಬಸವರಾಜ್ ಅವರನ್ನ ಮಕ್ಕಳು, ಪತ್ನಿ ಮನೆಯಿಂದ ಹೊರದಬ್ಬಿದ್ದರು ಎನ್ನಲಾಗಿದೆ. ಆದರೆ ನೆನ್ನೆ ಮನೆಗೆ ಬಂದಾಗ ಕೈಕಾಲು ಕಟ್ಟಿ ಹಾಕಿ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಾಯಿ ಮತ್ತು ಮಕ್ಕಳು ಸೇರಿ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Burqa Ban in Switzerland: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ!

ಬೆಂಗಳೂರಿನ ಶೆಡ್‌ನಲ್ಲಿ ಡಬಲ್‌ ಮರ್ಡರ್:‌ ಬಸ್‌ ಕ್ಲೀನರ್‌ಗಳ ಕೊಲೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ (Bengaluru crime news) ಉತ್ತರ ತಾಲೂಕಿನ ಸಿಂಗಹಳ್ಳಿಯಲ್ಲಿ ಖಾಸಗಿ ಬಸ್ಸುಗಳನ್ನು ನಿಲ್ಲಿಸುವ ಜಾಗದಲ್ಲಿ ಇರುವ ಶೆಡ್ ಒಂದರಲ್ಲಿ ಇಬ್ಬರು ವ್ಯಕ್ತಿಗಳ ಬರ್ಬರ ಹತ್ಯೆ (Double murder) ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಸಿಂಗಹಳ್ಳಿ ಗ್ರಾಮದ ಬಳಿ ಎಸ್ ಆರ್ ಎಸ್ ಟ್ರಾವೆಲ್ಸ್ ಬಸ್ಸುಗಳ ಪಾರ್ಕಿಂಗ್ ಮಾಡುವ ಜಾಗದಲ್ಲಿ ಇಬ್ಬರು ವ್ಯಕ್ತಿಗಳ ಶವ ಪತ್ತೆಯಾಗಿದೆ. ಮೃತಪಟ್ಟವರನ್ನು ನಾಗೇಶ್ (55) ಹಾಗೂ ಮಂಜುನಾಥ್ (50) ಎಂದು ಗುರುತಿಸಲಾಗಿದೆ. ಇಬ್ಬರೂ ಖಾಸಗಿ ಬಸ್‌ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತಿದ್ದರು.

ರಾತ್ರಿ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಬೆಳೆದು ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡು ಕೊಲೆಯಾಗಿದ್ದಾರಾ ಅಥವಾ ಬೇರೆ ಯಾರಾದರೂ ಇವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರಾ ಎಂದು ತನಿಖೆಯಲ್ಲಿ ತಿಳಿಯಬೇಕಿದೆ. ಕೊಲೆಯಾದ ಜಾಗದಲ್ಲಿ ಇನ್ನೂ ಹಲವರು ಸೇರಿಕೊಂಡು ಪಾರ್ಟಿ ಮಾಡಿದ ಗುರುತುಗಳಿದ್ದು, ಅವರು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಬಾಗಲೂರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳದ ಆಸುಪಾಸಿನ ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್‌ಗಳನ್ನು ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Poonam Mahajan: ʼನನ್ನ ತಂದೆಯ ಹತ್ಯೆಯ ಹಿಂದೆ ಕಾಣದ ಕೈಗಳ ಸಂಚಿದೆ…ʼ ಪ್ರಮೋದ್‌ ಮಹಾಜನ್‌ ಕೊಲೆ ಬಗ್ಗೆ ಪುತ್ರಿ ಪೂನಂ ಸ್ಫೋಟಕ ಹೇಳಿಕೆ