Saturday, 10th May 2025

Vijayapura News: ತೊಗರಿ ಇಳುವರಿ ಇಲ್ಲ, ಸರಕಾರ ರೈತರಿಗೆ ಪರಿಹಾರ ನೀಡಬೇಕು: ಬಾಳು ಮುಳಜಿ ಆಗ್ರಹ

ಇಂಡಿ: ತಾಲೂಕಿನ ರೈತರಿಗೆ ಪೂರೈಸಿದ ಜಿ.ಆರ್.ಜಿ ೧೫೨,ಜಿ.ಆರ್.ಜಿ ೮೧೧ ಬೀಜ ಸಂಪೂರ್ಣ ಕಳಪೆ ಮಟ್ಟದಾಗಿದ್ದು ರೈತರ ಇಳುವರಿ ಬರದೆ ಕಂಗಾಲಾಗಿದ್ದಾರೆ ಕೂಡಲೆ ಸರಕಾರ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಕ.ರ.ವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಹೇಳಿದರು.

     ನಗರದ ಖಾಸಗಿ ಬ್ಯಾಂಕ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಬಾರಿ ಮಳೆ ಸಕಾಲಿಕ ವಾಗಿ ರೈತರ ಮೊಗದಲ್ಲಿ ಮಂದಹಾಸ ತೊಗರಿ ಬಿತ್ತನೆ ಮಾಡಿದ್ದಾರೆ. ಸರಕಾರ ರೈತರಿಗೆ ವಿತರಣೆ ಮಾಡಿದ ಬೀಜ ಕಳಪೆ ಮಟ್ಟ ದಾಗಿದೆ. ಕೇವಲ ತೋಗರಿ ಗಿಡ ಮಾತ್ರ ೬,೭ ಅಡಿ ಎತ್ತರ ಬೆಳೆದಿದೆ ಕಾಯಿ ಬಿಡದೆ ರೈತರಿಗೆ ಅಪಾರ ನಷ್ಟವಾಗಿದೆ. ಕಾರಣ ಬೀಜಗಳನ್ನು ಪೂರೈಸಿದ ಕಂಪನಿಗಳಿಗೆ  ಕಪ್ಪು ಪಟ್ಟಿಗೆ ಸೇರಿಸಬೇಕು, ಸ್ಥಳೀಯ ತಾಲೂಕಾ ಆಡಳಿತ ಅಧಿಕಾರಿಗಳು ತೊಗರಿ ಬೆಳೆದ ರೈತರ ಜಮೀನುಗಳಿಗೆ ಹೋಗಿ ಸರಿಯಾಗಿ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿ ಸರಿಯಾಗಿ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾಗ ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸಿದಂತಾಗಿದೆ ಕೂಡಲೆ ಸರಕಾರ ರೈತರ ಸಂಕಷ್ಟಕ್ಕೆ ಬಂದು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜು ಕುಲಕರ್ಣಿ, ಮಹೇಶ ಹೂಗಾರ, ಮಹಿಬೂಬ ಬೇನೂರ, ಸಂದೇಶ ಗಲಗಲಿ, ಪ್ರವೀಣ ಪೋದ್ದಾರ, ಸುನೀಲ ಹಿರೇಮಠ, ಸಚೀನ ನಾವಿ, ಶಿವಾನಂದ ಮಡಿವಾಳ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.