Saturday, 10th May 2025

MP Ramesh Jigajinagi: 70 ವರ್ಷ ಆಳಿದ ಕಾಂಗ್ರೆಸ್ ಅಭಿವೃದ್ದಿ ಶೂನ್ಯ: ಸಂಸದ ರಮೇಶ ಜಿಗಜಿಣಗಿ

ಇಂಡಿ:ಒಡೇದಾಳು ನೀತಿಯಲ್ಲಿ ಕಾಂಗ್ರೆಸ್ ಪಕ್ಷ ನಂ.೦೧ ಈ ದೇಶ ೭೦ ವರ್ಷ ಆಳಿದೆ ಅಭಿವೃದ್ದಿ ಶೂನ್ಯ, ದೇಶದ ಹಣೆ ಬರಹ ಬರೆದ ಸಂವಿಧಾನ ಶಿಲ್ಪಿ ಡಾ,ಬಾಬಾಸಾಹೇಬ ಅಂಬೇಡ್ಕರವರಿಗೆ ಅವಮಾನ ಮಾಡಿದ ನಿಮಗೆ ದೇಶ ಆಳುವ ನೈತಿಕತೆ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಪಕ್ಷದ ವಿರುಧ್ಧ ಹರಿಹಾಯ್ದರು.

ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶ ಕಟ್ಟುವಲ್ಲಿ ಜನರ ಒಗ್ಗೂಡಿಸುವಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದಲ್ಲಿಯೇ ಭಾರತ ಬಲಾಢ್ಯಗೋಳಿಸಿ ಜಗಮೆಚ್ಚುವಂತೆ ಮಾಡಿದ್ದಾರೆ. ಇಂತಹ ಪ್ರಧಾನಿಗಳ ಅವಧಿಯಲ್ಲಿ ನಾನು ರಾಜಕಾರಣ ಮಾಡುತ್ತಿರುವುದು ನನ್ನ ಸೌಭಾಗ್ಯ.
 
ಜಿಲ್ಲೆಯ ಅಭಿವೃದ್ದಿಗಾಗಿ ೧ ಲಕ್ಷ ಕೋಟಿಗಿಂತ ಅಧಿಕ ಅನುಧಾನ ತಂದಿರುವೆ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಜಲಜೀವನ ಮಶಿನ್, ೪೦೦ ಮೇ ವಿದ್ಯುತ , ರೈಲು ಓರ್ ಬ್ರೀಜ್ , ಕೆರೆತುಂಬುವ ಯೋಜನೆ ಇಂತಹ ಹಲವಾರು ಕಾಮಗಾರಿಗಳು ತಂದು ಜಿಲ್ಲೆ ಅಭಿವೃದ್ದಿಪಡಿಸಿದ್ದೇನೆ. ಇಂದು ದೇಶ ಅಭಿವೃದ್ದಿಯಡೆ ಸಾಗುತ್ತಿದೆ ಇಂತಹ ಪ್ರಧಾನ ಮಂತ್ರಿಗಳು ನಮ್ಮ ದೇಶಕ್ಕೆ ಅವಶ್ಯ ಬಿಜೆಪಿ ದೇಶದಲ್ಲಿ ಪ್ರಬಲ ಪಕ್ಷವಾಗಿದೆ ಸದಸ್ಯತ್ವ ಅಭಿಯಾನ ಇನ್ನು ವೇಗದ ಗತಿಯಲ್ಲಿ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕೀವುಡೆ ಮಾತನಾಡಿದರು.

ವಿವೇಕ ಡಬ್ಬಿ, ಈರಣ್ಣಾ ರಾವೋರ, ಶೀಲವಂತ ಉಮರಾಣಿ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ಹಣಮಂತರಾಯಗೌಡ ಪಾಟೀಲ,ರವಿ ವಗ್ಗೆ, ವಿಯಲಕ್ಷ್ಮೀ ರೂಗಿಮಠ, ರಾಜಕುಮಾರ ಸಗಾಯ್,ದೇವೇಂದ್ರ ಕುಂಬಾರ, ಭೀಮಸಿಂಗ ರಾಠೋಡ, ಬಿ.ಎಸ್ ಪಾಟೀಲ, ಶ್ರೀಕಾಂತ ದೇವರ, ಅನುಸುಯ್ಯಾಮದರಿ, ಬೌರಮ್ಮಾ ನಾವಿ, ಶ್ಯಾಮ ಬಗಲಿ, ಸುನಂದಾ ಗಿರಣಿವಡ್ಡರ್ ವೇದಿಕೆಯಲ್ಲಿದ್ದರು.