Sunday, 11th May 2025

Monthly Pension: ತಾಲೂಕಿನ 92 ಮಂದಿ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಸಾಶನ   

ಚಿಕ್ಕನಾಯಕನಹಳ್ಳಿ : “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ 92 ಮಂದಿ ನಿರ್ಗತಿಕರ ಕುಟುಂಬಗಳ   ಮನೆ ಬಾಗಿಲಿಗೆ ಮಾಸಾಶನ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ ಎಂದು ಯೋಜನಾಧಿಕಾರಿ ಪ್ರೇಮಾನಂದ  ಹೇಳಿದರು. 

ಅವರು ದೊಡ್ಡ ರಾಂಪುರದ ದೊಡ್ಡಮ್ಮರವರಿಗೆ 1500 ರೂ ಮಾಸಾಶನದ ಮಂಜೂರಾತಿ ಪತ್ರ ವನ್ನು ನೀಡಿ ಈ ವಿಚಾರ ಹೇಳಿದರು.” 

ಜನಮಂಗಲ ಕಾರ್ಯಕ್ರಮದ ಮೂಲಕ ವಿಕಲ ಚೇತನ ವ್ಯಕ್ತಿಗಳಿಗೆ ವೀಲ್ ಚೇರ್,ವಾಕರ್, ವಾಟರ್ ಬೆಡ್ ಮುಂತಾದ ಸಲಕರಣೆಗಳನ್ನು ನೀಡುವ ಮೂಲಕ ಅವರ ಜತೆ ನಮ್ಮ ಸಂಸ್ಥೆ ಸದಾ ಇರುತ್ತದೆ. ಸಮುದಾಯದ ಅನೇಕ ಕಾರ್ಯಕ್ರಮಗಳಿಗೆ ಸಹಾಯ ಹಸ್ತವನ್ನು ಪೂಜ್ಯ ಧರ್ಮಾಧಿಕಾರಿಗಳು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಹೆಸರಹಳ್ಳಿ ಗೋಪಾಲ, ಗ್ರಾಮ ಪಂಚಾಯತ್ ಸದಸ್ಯ ನಾಗಭೂಷಣ್, ಮೇಲ್ವಿಚಾರಕ ರಮೇಶ್, ಸೇವಾಪ್ರತಿನಿಧಿ ನಾಗರತ್ನ ಒಕ್ಕೂಟದ ಪದಾಧಿಕಾರಿಗಳು, ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: #TumkurBreaking