Saturday, 10th May 2025

Mobile Use: ಉತ್ತಮ ಕೆಲಸ ಕಾರ್ಯಗಳಿಗೆ ಮಾತ್ರ ಮೊಬೈಲ್ ಬಳಸಿ

ಗುಬ್ಬಿ: ಮೊಬೈಲ್ ಬಳಕೆಯನ್ನು ಉತ್ತಮ ಕೆಲಸ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಗುಬ್ಬಿ ಚನ್ನಬಸವೇಶ್ವರ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಎನ್ ಯತೀಶ್ ಕುಮಾರ್ ತಿಳಿಸಿದರು.

ಪಟ್ಟಣದ ಪಂಚಮುಖಿ ಸಮುದಾಯ ಭವನದಲ್ಲಿ ಗುಬ್ಬಿ ಚನ್ನಬಸವೇಶ್ವರ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ವತಿಯಿಂದ ಏರ್ಪಡಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 

ಅವಶ್ಯಕತೆ ಗಿಂತ ಹೆಚ್ಚು ಅನವಶ್ಯಕ ಕೆಲಸಗಳಿಗೆ ಮಾತ್ರ ಮೊಬೈಲ್ ಬಳಕೆಯಾಗುತ್ತಿದೆ. ಪೋಷಕರು ಮಕ್ಕಳಿಗೆ ಸಿನಿಮಾ, ಟಿವಿ ಮಾಧ್ಯಮಗಳಿಂದ ದೂರ ಇಟ್ಟು  ಉತ್ತಮ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ವಿಮೆಗಳನ್ನು ಮಾಡಿಸಿಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂಪನಿಯ ನಿರ್ದೇಶಕರಾದ ಶಿವಶಂಕರ್, ಗುರುಪ್ರಸಾದ್, ತಮ್ಮಣ್ಣ, ಈರಣ್ಣ, ಸುಜೀವನ ಒಕ್ಕೂಟದ ಅಧ್ಯಕ್ಷರಾದ ಕುಂಭಯ್ಯ, ಸಿಇಒ ಮುದ್ದಗಂಗಯ್ಯ, ಚಂದ್ರಕಾಂತ್, ಗಿರೀಶ್ ಕುಮಾರ್, ಸಿಇಒ ಬಸವ ರಾಜು ಇತರರು ಇದ್ದರು.

Leave a Reply

Your email address will not be published. Required fields are marked *