
ಜಿಲ್ಲೆಯ ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ, ಹಲವಾರು ದಿನ ಗಳಿಂದ ಮಂಡಿ ನೋವಿನಿಂದ ಬಳಲು ತ್ತಿದ್ದರು. ಆದರೆ ಅವರ ಬಳಿ ಚಿಕಿತ್ಸೆಗೆ ಹಣ ವಿರಲಿಲ್ಲ. ಹೀಗಾಗಿ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿ ಶಾಸಕರ ಬಳಿ ಹೋಗಿದ್ದರು.
ಬಡ ವ್ಯಕ್ತಿಯ ಮನವಿಗೆ ತಕ್ಷಣವೇ ಸ್ಪಂದಿಸಿದ ಶಾಸಕ ಡಾ. ರಂಗನಾಥ್, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸ್ವತಃ ತಾವೇ ಆಪರೇಷನ್ ಮಾಡುವ ಮೂಲಕ ವ್ಯಕ್ತಿಗೆ ಬೇಕಾದ ಗುಣಮಟ್ಟದ ಪರಿಕರಗಳನ್ನು ನೀಡಿ ಉಚಿತ ಮಂಡಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಾನವೀ ಯತೆ ಮೆರೆದಿದ್ದಾರೆ.
ಈ ಹಿಂದೆ ಕುಣಿಗಲ್ ತಾಲೂಕು ಕುಂದೂರು ತಾಲೂಕಿನ ಬಡ ಮಹಿಳೆ ಆಶಾ ಎಂಬವರ ಕೀಲು ಡಿಸ್ ಕೇಟ್ ಆಗಿತ್ತು. ಶಸ್ತ್ರಚಿಕಿತ್ಸೆಗೆ ಐದಾರಯ ಲಕ್ಷ ಖರ್ಚಾಗುತ್ತಿತ್ತು. ಈ ಬಗ್ಗೆ ಶಾಸಕರ ಬಳಿ ಬಂದು ಮಹಿಳೆ ನೋವು ತೋಡಿಕೊಂಡಿದ್ದರು. ಬಳಿಕ ಮಹಿಳೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಡಾ.ರಂಗನಾಥ್ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ದ್ದರು.
ಸಚಿವ ಪರಮೇಶ್ವರ್ ಅಭಿನಂದನೆ: ಉಚಿತವಾಗಿ ಆಪರೇಷನ್ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಶಾಸಕ ಡಾ.ರಂಗನಾಥ್ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿನಂದನೆ ಸಲ್ಲಿಸಿ ಪ್ರಶಂಸಿಸಿದ್ದಾರೆ.