ಇಂಡಿ: ಭಾರತ ಭಾವೈಕ್ಯತೆಯ ಬೀಡು ಅನೇಕ ಧರ್ಮ ಅನೇಕ ಪಂಗಡ ಸಾಮರಸ್ಯದ ಬೀಡು ಭಾರತ ದೇಶದಲ್ಲಿ ಅನೇಕ ದೇವಾಲಯಗಳು ಇರುವದರಿಂದ್ದ ಭಾರತ ದೇವಾಲಯಗಳ ತೊಟ್ಟಿಲು ಎಂದರೆ ತಪ್ಪಾಗುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯಲ್ಲಿನಡೆದ ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿ ಸರಳ ಸಾಮೋಹಿಕ ವಿವಾಹ ಹಾಗೂ ಮಹಾಲಕ್ಮೀ ದೇವಸ್ಥಾನ, ಮಂಗಲಕಾರ್ಯಾಲಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಜಾತ್ರೆಗಳು ಹಬ್ಬ ಹರಿದಿನಗಳಿಂದ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯನಿಗೆ ಒಳ್ಳೇಯ ಸದ್ಗುಣಗಳು ಬೆಳೆಯುತ್ತವೆ. ಅಡಂಬರ ವಿವಾಹಗಳು ಸಾಲದ ಸುಳಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತದೆ. ಸರಳ ಸಾಮೋಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ ಇಂತಹ ಜಗದ್ಗುರುಗಳ ಆರ್ಶೀವಾದ ಪಡೆದು ಕೃತಾರ್ಥರಾಗುತ್ತೆವೆ. ಮಹಾಪೂಜ್ಯರ, ಶರಣರ, ದಾರ್ಶನಿಕರ ಕೈಯಿಂದ ಅಕ್ಷತೆ ಹಾಕುವುದರಿಂದ ಪವಿತ್ರ ಜೀವನಕ್ಕೆ ನಾಂದಿಯಾಗುತ್ತದೆ ಸಮಾಜದಲ್ಲಿ ಇಂತಹ ವಿವಾಹಗಳಿಗೆ ಪ್ರೋತ್ಸಾಹಿಸಬೇಕು ಎಂದರು.
ಅನೇಕ ಪೂಜ್ಯರು, ಶಾಸಕರು ರಾಜಕೀಯ ಧುರಣಿರ ಸಾವಿರಾರು ಭಕ್ತರ ಸಮುಖ ಸರಳ ಸಾಮೋಹಿಕ ಮಧುವೆ ಭಾಗ್ಯವಂತರ ಮದುವೆ ಎಂದು ಉಜ್ಜೇನಿ ಮಹಾಸಂಸ್ಥಾನ ಪೀಠದ ಸಿದ್ದಲಿಂಗರಾಜದೇಶಿಕೇAದ್ರ ಶಿವಾರ್ಚಾರು ನುಡಿದರು.
ತಡಲಗಾದ ಅಭಿನವ ರಾಚೋಟೇಶ್ವರ ಶಿವಾರ್ಚಾರು, ಸೋಮನಾಥ ಶಿವಾಚಾರ್ಯರು, ಸಿದ್ದನಕೇರಿ ರಾಚೋಟೇಶ್ವರ ಶಿವಾಚಾರ್ಯರು, ಸಾತನೂರ ಮಹಾಂತಲಿAಗ ಶಿವಾಚಾರ್ಯರು, ವೀಋ ಗಂಗಾಧರ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು,ಶಿವಾನಂದ ಶಾಸ್ತಿç, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ತಮ್ಮಣ್ಣಾ ಪೂಜಾರಿ ಮಾತನಾಡಿದರು.
೧೨ ಜೋಡಿಗಳ ಸಾಮೋಹಿಕ ವಿವಾಹ ಇರುಗಿತ್ತು. ಬಾಬುಸಾಹುಕಾರ ಮೇತ್ರಿ, ಚಂದ್ರಶೇಖರ ರೂಗಿ, ಡಾ.ರಮೇಶ ಪೂಜಾರಿ, ಶಿವಯ್ಯಾ ಮಠಪತಿ, ಗೀತಾಗುತ್ತರಗಿಮಠ, ಮಳಸಿದ್ದ ಬ್ಯಾಳಿ, ಬಸವರಾಜ ಇಂಡಿ, ಶಾಂತಯ್ಯಾ ಹಿರೇಮಠ, ರಾಮಲಿಂಗೇಶ್ವರ ಸ್ವಾಮೀಜಿ ಇದ್ದರು.
ಪೋಟೋಕ್ಯಾಪ್ಸನ್ ೩೦ ಇಂಡಿ೦೧_ ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯಲ್ಲಿನಡೆದ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸರಳ ಸಾಮೋಹಿಕ ವಿವಾಹ ಹಾಗೂ ಮಹಾಲಕ್ಮೀ ದೇವಸ್ಥಾನ, ಮಂಗಲಕಾರ್ಯಾಲಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಉಜ್ಜೇನಿ ಮಹಾಸಂಸ್ಥಾನ ಪೀಠದ ಸಿದ್ದಲಿಂಗರಾಜದೇಶಿಕೇAದ್ರ ಶಿವಾರ್ಚಾರು ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು.