Sunday, 18th May 2025

ಜಲಾವೃತ ಪ್ರದೇಶಕ್ಕೆ ಶಾಸಕ ಗೌರಿಶಂಕರ್ ಭೇಟಿ

ತುಮಕೂರು: ತಾಲೂಕಿನ ನರಸಾಪುರ ಗ್ರಾಮ ವ್ಯಾಪ್ತಿಯ ನೂರಾರು ಎಕರೆ ವ್ಯವಸಾಯ ಯುಕ್ತ ಜಮೀನು ಜಲಾವೃತವಾಗಿ ಬೆಳೆ ಹಾನಿಯಾಗಿದ್ದು, ಸೋಮವಾರ ನರಸಾಪುರ ಗ್ರಾಮಕ್ಕೆ ಶಾಸಕ ಗೌರಿಶಂಕರ್ ಭೇಟಿ ನೀಡಿ ಹಾನಿ ಗೊಳಗಾದ ಪ್ರದೇಶವನ್ನು ವೀಕ್ಷಿಸಿ, ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್, ಮಹಾನಗರಪಾಲಿಕೆ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳು, ಮತ್ತು ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಭೆ ನಡೆಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಸೂಚಿಸಿದರು.

ಇದೇ ವೇಳೆ ನರಸಾಪುರ ಗ್ರಾಮದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಪಕ್ಕದಿಂದ ಪಂಪ್ ಹೌಸ್ ವರೆಗೂ ಸಿಸಿ ರಸ್ತೆ ನರ‍್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದೆನು.