Tuesday, 13th May 2025

Minister V Somanna: ತಾಲ್ಲೂಕಿಗೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ

ಚಿಕ್ಕನಾಯಕನಹಳ್ಳಿ : ಶುಕ್ರವಾರದಂದು ಬೆಳಗ್ಗೆ ಶಿರಾ-ಬುಕ್ಕಾಪಟ್ಟಣ ಮಾರ್ಗವಾಗಿ ತಾಲ್ಲೂಕಿಗೆ ಆಗಮಿಸಿದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣನವರು ರಸ್ತೆ ಮಾರ್ಗವಾಗಿ ಚಲಿಸುತ್ತಾ ಹಲವು ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಉದ್ದಕ್ಕೂ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಹುಳಿಯಾರು ಪಟ್ಟಣದ ಒಣಕಾಲುವೆ ಕಾಮಗಾರಿಯನ್ನು ವೀಕ್ಷಿಸಿ, ಕಾಮಗಾರಿ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ, ಕುಪ್ಪೂರು ಗದ್ದಿಗೆ ಮಠಕ್ಕೆ ಭೇಟಿಕೊಟ್ಟು ನೂತನವಾಗಿ ಪಟ್ಟಾಧಿಕಾರ ವಹಿಸಿಕೊಂಡ ಶ್ರೀ ತೇಜೇಶ್ವರ ಶಿವಾಚಾರ್ಯರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.

ತದನಂತರ, ಚಿಕ್ಕನಾಯಕನಹಳ್ಳಿ ಪಟ್ಟಣದ ಮೂಲಕ ಜೆ ಸಿ ಪುರದ ಬಳಿಯಿರುವ ಬಿ.ಪಾಳ್ಯದ ಸಿದ್ಧರಾಮೇಶ್ವರ ಶ್ರವಣದೋಷ (ಕಿವುಡ ಮತ್ತು ಮೂಕ) ಮಕ್ಕಳ ವಸತಿ ಶಾಲೆಗೆ ಭೇಟಿನೀಡಿ ಮಕ್ಕಳನ್ನು ಕಂಡು ಮಾತಾಡಿ, ಅಲ್ಲಿಂದ ತಿಪಟೂರು ತಾಲ್ಲೂಕಿನ ಕಡೆಗೆ ಹೊರಟರು.

ಈ ಸಂದರ್ಭದಲ್ಲಿ, ಸಚಿವ ಸೋಮಣ್ಣನವರೊಂದಿಗೆ ಶಾಸಕ ಸಿ ಬಿ ಸುರೇಶ್ ಬಾಬು, ತಹಸೀಲ್ದಾರ್ ಕೆ ಪುರಂದರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.